ವಾಷಿಂಗ್ಟನ್, ನ.10 (DaijiworldNews/PY): ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ಅವರನ್ನು ಡೊನಾಲ್ಡ್ ಟ್ರಂಪ್ ಅವರು ವಜಾ ಮಾಡಿದ್ದು, ಭಯೋತ್ಪಾದಕ ನಿಗ್ರಹ ವಿಭಾಗದ ಮುಖ್ಯಸ್ಥ ಕ್ರಿಸ್ಟೋಫರ್ ಮಿಲ್ಲರ್ ಅವರನ್ನು ಆ ಹುದ್ದೆಗೆ ನೇಮಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮಾರ್ಕ್ ಎಸ್ಪೆರ್ ಅವರನ್ನು ಹುದ್ದೆಯನ್ನು ವಜಾ ಮಾಡಲಾಗಿದ್ದು, ಭಯೋತ್ಪಾದಕ ನಿಗ್ರಹ ವಿಭಾಗದ ಮುಖ್ಯಸ್ಥ ಕ್ರಿಸ್ಟೋಫರ್ ಮಿಲ್ಲರ್ ಅವರನ್ನು ಹಂಗಾಮಿ ರಕ್ಷಣಾ ಕಾರ್ಯದರ್ಶಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ನೇಮಕ ಮಾಡಿದ್ದು, ಇದು ಸಂತಸ ತಂದಿದೆ. ಮಾರ್ಕ್ ಎಸ್ಪೆರ್ ಅವ ಸೇವೆಗೆ ಕೃತಜ್ಞತೆಗಳು" ಎಂದಿದ್ದಾರೆ.
ಕಳೆದ ಬೇಸಿಗೆಯಲ್ಲಿ ನಾಗರಿಕ ಅಶಾಂತಿ ತಲೆದೋರಿದ್ದ ವೇಳೆ ಟ್ರಂಪ್ ಹಾಗೂ ಎಸ್ಪೆರ್ ನಡುವೆ ಬಿರುಕು ಮೂಡಿತ್ತು. ಅಲ್ಲದೇ, ಅಮೇರಿಕಾದಲ್ಲಿ ದೇಶೀಯ ಅಶಂತಿಯನ್ನು ನಿಯಂತ್ರಿಸುವಲ್ಲಿ ಮಿಲಿಟರಿ ವಹಿಸಿದ ಪಾತ್ರದ ವಿಚಾರವಾಗಿ ಟ್ರಂಪ್ ಆಡಳಿತದ ಬಗ್ಗೆ ಚರ್ಚೆಯಾಗಿತ್ತು.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಜೋ ಬೈಡನ್ ಚುನಾಯಿತ ಅಧ್ಯಕ್ಷ ಎಂದು ಘೋಷಣೆಯಾದ ಬಳಿಕ ಈ ಬೆಳವಣಿಗೆಯಾಗಿದೆ.