ವಾಷಿಂಗ್ಟನ್, ನ.10 (DaijiworldNews/HR): ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ್ ಜೊತೆ ಸೇರಿ ದುಡಿಯುವ ವರ್ಗಕ್ಕೆ ಅನುಕೂಲವಾಗುವಂತಹ ಆರ್ಥಿಕ ನೀತಿ ರೂಪಿಸುತ್ತೇವೆ ಜೊತೆಗೆ ಅಮೆರಿಕದ ಇತಿಹಾಸದ ಮುಂದಿನ ಅಧ್ಯಾಯ ಬರೆಯಲು ಸಜ್ಜಾಗುತ್ತಿದ್ದೇನೆ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಮತ್ತು ಬಿಡನ್ ಸೇರಿ ದೇಶದ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಅಧಿಕಾರವಹಿಸಿಕೊಂಡ ಮೊದಲ ದಿನ ಕೊರೊನಾ ರೋಗ ನಿರ್ವಹಣೆ, ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆ ನಿಭಾಯಿಸುವ ಕುರಿತು ನಾವು ಕೆಲಸ ಮಾಡಲಿದ್ದೇವೆ ಎಂಬುದಾಗಿ ಬಿಡೆನ್ ಅವರ ತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.