ವಾಷಿಂಗ್ಟನ್, ನ. 11 (DaijiworldNews/MB) : ''ನನಗೆ ಗೆಲುವು ತಪ್ಪಿಸಲೆಂದೇ ತಡವಾಗಿ ಕೊರೊನಾ ಲಸಿಕೆ ಘೋಷಣೆ ಮಾಡಲಾಗಿದೆ'' ಎಂದು ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
''ಲಸಿಕೆ ಸಿದ್ದವಾದ ಬಳಿಕವೂ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಮತ್ತು ಫೈಝರ್ ಕಂಪೆನಿಯು ಚುನಾವಣೆ ಮುಗಿಯುವವರೆಗೂ ಘೋಷಣೆ ಮಾಡಲಿಲ್ಲ'' ಎಂದು ದೂರಿದ್ದಾರೆ.
''ಲಸಿಕೆ ಸಂಶೋಧನೆಯ ಯಶಸ್ಸು ನನಗೆ ದೊರೆಯುವುದು ಅಮೇರಿಕಾದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಮತ್ತು ಡೆಮಾಕ್ರಟಿಕರಿಗೆ ಬೇಕಾಗಿರಲ್ಲಿಲ್ಲ. ಹಾಗಾಗಿ ಲಸಿಕೆ ಸಿದ್ದವಿದ್ದರೂ ಕೂಡಾ ಐದು ದಿನಗಳ ಬಳಿಕ ಘೋಷಣೆ ಮಾಡಲಾಗಿದೆ. ಎಲ್ಲವೂ ನಾನು ಹೇಳಿಕೊಂಡು ಬಂದತೆಯೇ ಆಗಿದೆ'' ಎಂದು ಹೇಳಿದ್ದಾರೆ.
ಫೈಝರ್ ಕಂಪೆನಿಯು ಸೋಮವಾರ, ''ತಾನು ಅಭಿವೃದ್ದಿಪಡಿಸಿದ ಕೊರೊನಾ ಲಸಿಕೆ ಸೋಂಕಿತರ ಮೇಲೆ ಶೇ. 90 ರಷ್ಟು ಪರಿಣಾಮ ಬೀರಿರುವುದು ಮೂರನೇ ಹಂತದ ಪ್ರಯೋಗದ ವೇಳೆ ಸಾಬೀತಾಗಿದೆ'' ಎಂದು ತಿಳಿಸಿದೆ.