ವಾಷಿಂಗ್ಟನ್, ನ.11 (DaijiworldNews/PY): ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಿದ್ದು ಜೊ ಬಿಡೆನ್ ಅವರು ಗದ್ದುಗೆ ಏರಲು ತಯಾರು ಮಾಡುತ್ತಿರುವ ವೇಳೆಯೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಹಠ ಮುಂದುವರಿಸಿದ್ದು, "ನಾನು ಗದ್ದುಗೆ ಏರಿ ಬರುತ್ತೇನೆ. ಬಿಡೆನ್ ಅವರ ಸಿದ್ದತೆಗಳನ್ನು ತಡೆಯುತ್ತೇನೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಖಂಡಿತ ನಾನು ವಿಜಯಶಾಲಿಯಾಗುತ್ತೇನೆ. ಮುಂದಿನ ವಾರ ಫಲಿತಾಂಶ ಹೊರಬೀಳಲು ಪ್ರಾರಂಭವಾಗುತ್ತದೆ. ಪುನಃ ಅಮೇರಿಕಾವನ್ನು ದೊಡ್ಡ ರಾಷ್ಟ್ರವನ್ನಾಗಿಸೋಣ" ಎಂದಿದ್ದಾರೆ.
"ನಾನು ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಜೊ ಬಿಡೆನ್ ಅವರು ಗೆದ್ದ ರಾಜ್ಯದಲ್ಲಿನ ಮತದಾನ ಹಾಗೂ ಮತ ಎಣಿಕೆಯ ವಿರುದ್ದ ನಾನು ಕೋರ್ಟ್ ಮೊರೆ ಹೋಗುತ್ತೇನೆ. ಇದರಲ್ಲಿ ನಾನೇ ಜಯಶಾಲಿಯಾಗುತ್ತೇನೆ" ಎಂದಿದ್ದಾರೆ.
ನ.3ರಂದು ಚುನಾವಣೆ ನಡೆದ ಫಲಿತಾಂಶ ಹೊರಬಿದ್ದ ಬಳಿಕ ಡೊನಾಲ್ಡ್ ಟ್ರಂಪ್ ಅವರು ತಮ್ಮ ಗಾಲ್ಫ್ ಕೋರ್ಸ್ನಲ್ಲಿ ತೆರಳಿ ಎರಡು ಬಾರಿ ಆಟವಾಡಿದ್ದಾರೆ. ಇದನ್ನು ಬಿಟ್ಟರೆ ಅವರು ಹೊರಗಡೆ ಕಾಣಿಸಿಕೊಂಡಿಲ್ಲ. ಅಲ್ಲದೇ, ಈ ನಡುವೆ ಅವರು ಮಾಧ್ಯಮಗಳೊಂದಿಗೆ ಕೂಡಾ ಮಾತನಾಡಿಲ್ಲ. ಏತನ್ಮಧ್ಯೆ ಅವರು ಟ್ವೀಟ್ ಮಾಡುವುದರಲ್ಲೇ ತಮ್ಮ ಕಾಲ ಕಳೆಯುತ್ತಿದ್ದಾರೆ.
ಹೊಸ ಅಧ್ಯಕ್ಷರ ಘೋಷಣೆಯಾದ ಬಳಿಕ ನಿರ್ಗಮಿತ ಅಧ್ಯಕ್ಷ ನೂತನ ಅಧ್ಯಕ್ಷರನ್ನು ಶ್ವೇತಭವನಕ್ಕೆ ಆಹ್ವಾನಿಸಿ ವ್ಯವಸ್ಥೆಯ ಬಗ್ಗೆ ತಿಳಿಸಬೇಕು. ಅಲ್ಲದೇ ಔಪಚಾರಿಕವಾಗಿ ಅವರಿಗೆ ಶುಭಕೋರಬೇಕು. ಅದರೆ, ಡೊನಾಲ್ಡ್ ಟ್ರಂಪ್ ಅವರು ಈ ರೀತಿಯಾದ ಯಾವುದೇ ಕಾರ್ಯಗಳನ್ನು ಮಾಡಿಲ್ಲ. ಮುಂದೆ ಬರುವ ಅಧ್ಯಕ್ಷರಿಗೆ ದೊರಕುವಂತ ಸೌಲಭ್ಯಗಳಲ್ಲಿ ಬದಲಾವಣೆ ಮಾಡಿ ಜೊ ಬಿಡೆನ್ ಅವರಿಗೆ ದೊರಕದಂತೆ ಮಾಡಿದ್ದಾರೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ರೂಪಾಂತರ ನಿಧಿ ಆಡಳಿತದ ಸಾಮಾನ್ಯ ಸೇವೆಗಳ ಮುಖ್ಯಸ್ಥ ಎಮಿಲಿ ಮುರ್ಫಿ ಅವರನ್ನು ನೇಮಕ ಮಾಡಿದ್ದು, ಬಿಡೆನ್ ಅವರಿಗೆ ಯಾವುದೇ ಪ್ಯಾಕೇಜ್ಗಳನ್ನು ಕೂಡಾ ನೀಡದಂತೆ ತಿಳಿಸಿದ್ದಾರೆ ಎನ್ನಲಾಗಿದೆ.