ವಾಷಿಂಗ್ಟನ್, ನ.11 (DaijiworldNews/PY): ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ಭಾರತೀಯ ಅಮೇರಿಕನ್ ಕಾಶ್ ಪಟೇಲ್ ಅವರನ್ನು ನೇಮಿಸಿರುವುದಾಗಿ ಅಮೇರಿಕಾ ಸರ್ಕಾರ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ಅವರನ್ನು ವಜಾ ಮಾಡಿ ಭಯೋತ್ಪಾದಕ ನಿಗ್ರಹ ವಿಭಾಗದ ಮುಖ್ಯಸ್ಥ ಕ್ರಿಸ್ ಮಿಲ್ಲರ್ ಅವರನ್ನು ಆ ಹುದ್ದೆಗೆ ನೇಮಕ ಮಾಡಿದ್ದರು. ಇದಾದ ಬಳಿಕ ಈ ನೂತನ ನೇಮಕಾತಿಯ ವಿಚಾರ ಪೆಂಟಗನ್ ಕಚೇರಿಯಿಂದ ಹೊರಬಿದ್ದಿದೆ.
ಸೋಮವಾರದಿಂದ ಕ್ರಿಸ್ ಮಿಲ್ಲರ್ ಅವರು ರಕ್ಷಣಾ ಇಲಾಖೆಗೆ ಸೇರಿದಂತ ಎಲ್ಲಾ ಕಾರ್ಯಚಟುವಟಿಕೆ ಸೇರಿದಂತೆ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ ಎಂದು ಪೆಂಟಗನ್ ಭವನದ ಪ್ರಕಟಣೆ ತಿಳಿಸಿದೆ.
ಕಾಶ್ ಪಟೇಲ್ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದರು. ಅವರನ್ನು ಮಿಲ್ಲರ್ ಅವರು ತಮ್ಮ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
ಕಾಶ್ ಪಟೇಲ್ ಅವರು ಜೆನ್ ಸ್ಟ್ರೀವರ್ಟ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.