ಮನಿಲಾ, ನ.13 (DaijiworldNews/PY): "ಬುಧವಾರ ಫಿಲಿಫೈನ್ಸ್ನಲ್ಲಿ ಅಪ್ಪಳಿಸಿದ ವಾವ್ಕೊ ಚಂಡಮಾಡುತದ ಪರಿಣಾಮ 39 ಮಂದಿ ಸಾವನ್ನಪ್ಪಿದ್ದು, 32 ಮಂದಿ ಕಾಣೆಯಾಗಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಮನಿಲಾದಲ್ಲಿ ಚಂಡಮಾರುತದ ಪರಿಣಾಮ ಮನೆಗಳಿ ಭಾಗಶಃ ಹಾನಿಯಾಗಿವೆ. ಇಲ್ಲಿಯವರೆಗೆ ಸಾವಿರಾರು ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಸೇನಾ ಪಡೆಗಳು ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ" ಎಂದು ಸೇನಾ ಸಿಬ್ಬಂದು ಮುಖ್ಯಸ್ಥ ಜನರಲ್ ಗಿಲ್ಬರ್ಟ್ ಗೊಪಾಯ್ ತಿಳಿಸಿದ್ದಾರೆ.
"ಉತ್ತರ ಮನಿಲಾದ ಬುಲಾಕನ್ ಹಾಗೂ ಪಂಪಂಗಾ ಪ್ರದೇಶಗಳಲ್ಲಿ ವಾವ್ಕೊ ಚಂಡಮಾರುತವು ಗುರುವಾರ ತಡರಾತ್ರಿ ಅಪ್ಪಳಿಸಿದ್ದು, ಚಂಡಮಾರುತ ಅಪ್ಪಳಿಸಿದ ಪರಿಣಾಮ ಮನೆ ಸೇರಿದಂತೆ ವಿದ್ಯುತ್ ಕಂಬಗಳಿಗೆ ಹಾಗೂ ಮರಗಳಿಗೆ ಹಾನಿಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಲ್ಲಿಯವರೆಗೆ ಕರಾವಳಿ ಹಾಗೂ ತಗ್ಗು ಪ್ರದೇಶದಿಂದ ಸುಮಾರು 3,50,000 ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ರವಾನಿಸಲಾಗಿದೆ. ಇನ್ನು ಮನಿಲಾದಲ್ಲಿ 100,000 ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ" ಎಂದು ಫಿಲಿಫೈನ್ಸ್ ರಾಷ್ಟ್ರೀಯ ಪೊಲೀಸರು ಮಾಹಿತಿ ನೀಡಿದ್ದಾರೆ.