ವಾಷಿಂಗ್ಟನ್,ನ.13 (DaijiworldNews/HR): ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಅಕ್ರಮಗಳ ಕುರಿತು ಸುಳ್ಳು ಆರೊಪ ಮಾಡಿದ್ದು, ಇದು ಜೋ ಬಿಡೆನ್ ಅವರ ಆಡಳಿತಕ್ಕೆ ಮಾತ್ರವಲ್ಲದೆ ಪ್ರಜಾಪ್ರಭುತ್ವವಕ್ಕೆ ಮಾರಕವಾಗಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಟ್ರಂಪ್ ಅವರು ಆಧಾರ ರಹಿತವಾಗಿ ಸುಳ್ಳು ಆರೋಪಗಖನ್ನು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಒಂದು ಪ್ರಯತ್ನ, ಇದೊಂದು ಅಪಾಯದ ಮಾರ್ಗ ಕೂಡ ಆಗಿದೆ ಎಂದರು.
ಇನ್ನು ಟ್ರಂಪ್ ಮಾಡಿರುವ ಸುಳ್ಳು ಆರೋಪಗಳೊಂದಿಗೆ ಪ್ರಜಾಪ್ರಭುತ್ವವನ್ನು ಅರಿತಿರುವ ಇತರೆ ರಿಪಬ್ಲಿಕನ್ ಪಕ್ಷದ ಅಧಿಕಾರಿಗಳು, ಇಂಥವರ ಹಿಂದೆ ಹೋಗುತ್ತಿದ್ದಾರಲ್ಲಾ ಎಂದು ನನ್ನನ್ನು ಚಿಂತೆಗೀಡುಮಾಡಿದೆ ಎಂದು ಹೇಳಿದ್ದಾರೆ.