ವಿಶ್ವಸಂಸ್ಥೆ, ನ.13 (DaijiworldNews/PY): "ಕೊರೊನಾ ವಿರುದ್ದದ ಹೋರಾಟದಲ್ಲಿ ಅಭಿವೃದ್ದಿಶೀಲ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಸಿದ್ದ" ಎಂದು ಭಾರತ ಮತ್ತೊಮ್ಮೆ ಜಿ-77 ರಾಷ್ಟ್ರಗಳಿಗೆ ಪುನರುಚ್ಚರಿಸಿದೆ.
ಜಿ -77 ವಿದೇಶಾಂಗದ 44 ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅವರು, "ಅಭಿವೃದ್ದಿಯ ವಿಷಯದಲ್ಲಿ ನಮ್ಮ ಪಾಲುದಾರ ರಾಷ್ಟ್ರಗಳಿಗೆ ಸಹಕರಿಸುತ್ತೇವೆ. ಈ ಬಗ್ಗೆ ಯಾವುದೇ ಷರತ್ತುಗಳು ಇರುವುದಿಲ್ಲ" ಎಂದಿದ್ದಾರೆ.
"ಕೊರೊನಾವು, ಅಭಿವೃದ್ದಿ ಹೊಂದುತ್ತಿರುವ ದೇಶಗಳು ದಶಕಗಳ ಹಿಂದೆ ಮಾಡಿದ ಅಭಿವೃದ್ದಿ ಹಾಗೂ ಲಕ್ಷಾಂತರ ಜನರನ್ನು ಮತ್ತೆ ಬಡತನಕ್ಕೆ ತಳ್ಳುತ್ತಿದೆ" ಎಂದು ಹೇಳಿದ್ದಾರೆ.
"ಜಿ-77 ದೇಶಗಳಂತೆ ನಾವು ಇದನ್ನು ಮಾಡಲು ಬಿಡುವುದಿಲ್ಲ. ಇದರ ನಿಯಂತ್ರಣಕ್ಕೆ ಹಾಗೂ ಆರ್ಥಿಕತೆಯ ಸುಧಾರಣೆಗೆ ನಾವು ಸಾಮೂಹಿಕವಾಗಿ ಧ್ವನಿ ಎತ್ತಬೇಕಿದೆ" ಎಂದಿದ್ದಾರೆ.