ವಾಷಿಂಗ್ಟನ್, ನ.14 (DaijiworldNews/HR): ಅಮೇರಿಕಾದ ಎಲ್ಲಾ ಜನರಿಗೆ ಕೊರೊನಾ ಲಸಿಕೆ ಮುಂದಿನ ವರ್ಷ ಎಪ್ರಿಲ್ ವೇಳೆಗೆ ಲಭ್ಯವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕೆಯು ಮುಂದಿನ ವರ್ಷ ಎಪ್ರಿಲ್ ವೇಳೆಗೆ ಲಭ್ಯವಾಗಲಿದ್ದು, ಲಸಿಕೆಯನ್ನು ಮೊದಲಿಗೆ ಕಾರ್ಯಕರ್ತರಿಗೆ, ಹಿರಿಯರಿಗೆ ಮತ್ತು ಅತಿ ಅಪಾಯದಲ್ಲಿರುವವರಿಗೆ ನೀಡಲಾಗುತ್ತದೆ ಎಂದರು.
ಇನ್ನು ಅಮೇರಿಕಾದ ಎಲ್ಲಾ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲು ನಾವು ಹೂಡಿಕೆ ಮಾಡುತ್ತಿದ್ದು, ಎಪ್ರಿಲ್ ವೇಳೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.