ಇಸ್ಲಾಮಾಬಾದ್,ನ.14 (DaijiworldNews/HR): ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ, ಅವರೊಬ್ಬ ನಿಷ್ಪ್ರಯೋಜಕ ವ್ಯಕ್ತಿ ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಜ್(ಪಿಎಂಎಲ್-ಎನ್) ಪಕ್ಷದ ಉಪಾಧ್ಯಕ್ಷೆ ಮಾರ್ಯಂ ನವಾಜ್ ಷರೀಫ್ ಹೇಳಿದ್ದಾರೆ.
ಈ ಕುರಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, "ಪ್ರಧಾನಿ ಇಮ್ರಾನ್ ಖಾನ್ ಅನಗತ್ಯವಾಗಿ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದು, ಆಡಳಿತದಲ್ಲಿ ಅವರ ಪಾತ್ರ ನಿಷ್ಪ್ರಯೋಜಕವಾಗಿದ್ದು, ಅವರನ್ನು ಯಾರೊಬ್ಬರು ಗಂಭೀರವಾಗಿ ಪರಿಗಣಿಸುತ್ತಿಲ್ಲಎಂದು ಹೇಳಿದ್ದಾರೆ".
ಇನ್ನು ಕರಾಚಿ ಘಟನೆ ಕುರಿತು ಮಾತನಾಡಿದ ಅವರು, ನಾವು ಇದ್ದ ಕೋಣೆಯ ಬಾಗಿಲನ್ನು ಮುರಿದು ಹಾಕಿ ಪತಿಯನ್ನು ಬಂಧಿಸಿದ್ದರು. ಸಿಂಧ್ ಪ್ರಾಂತ್ಯದ ಐಜಿಪಿ(ಇನ್ಸ್ ಪೆಕ್ಟರ್ ಜನರ್ ಆಫ್ ಪೊಲೀಸ್)ಯನ್ನು ಅಪಹರಿಸಿದ್ದರು. ಇಷ್ಟಾದರೂ ಪ್ರಧಾನಿ ಇಮ್ರಾನ್ ಖಾನ್ಗೆ ಮಾತ್ರ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.