ಬುಚರೆಸ್ಟ್,ನ.15 (DaijiworldNews/HR): ರುಮೇನಿಯಾದ ಕೊರೊನಾ ಪಿಯಾಟ್ರಾ ನೀಮ್ಟ್ ಕಂಟ್ರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಗ್ನಿ ಅವಘಡವು ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿದ್ದು, ಬೆಂಕಿಯ ಕೆನ್ನಾಲೆಯಲ್ಲಿ ಸಿಲುಕಿ 10 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವ ನೆಲು ಟಾಟಾರು ಅವರು, ಆಸ್ಪತ್ರೆಯಲ್ಲಿ ಉಳಿದಿರುವ ಕೊರೊನಾ ಸೋಂಕಿತರನ್ನು ಪೂರ್ವ ರೊಮೇನಿಯನ್ ನಗರದ ಕೊರೊನಾ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವು ವೈದ್ಯರಿಗೂ ಸುಟ್ಟ ಗಾಯಗಾಳಾದ್ದು, ಅವರನ್ನು ರಾಜಧಾನಿ ಬುಚಾರೆಸ್ಟ್'ನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.