ವಾಷಿಂಗ್ಟನ್, ನ. 18 (DaijiworldNews/MB) : ಕೇವಲ 30 ನಿಮಿಷಗಳಲ್ಲೇ ಫಲಿತಾಂಶ ನೀಡುವ ಮೊದಲ ಕೊರೊನಾ ಸ್ವಯಂ ಪರೀಕ್ಷೆ ಕಿಟ್ಗೆ ಅಮೇರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್ಡಿಎ) ಬಳಕೆಗೆ ಮಂಗಳವಾರ ಅನುಮತಿ ನೀಡಿದೆ.
ಲುಸಿರಾ ಹೆಲ್ತ್ ಅಭಿವೃದ್ದಿ ಪಡಿಸಿರುವ ಈ ಕಿಟ್ ಏಕಬಳಕೆಯ ಕಿಟ್ ಆಗಿದೆ. ಇದನ್ನು ಆಸ್ಪತ್ರೆಗಳಲ್ಲಿಯೂ ಈ ಕಿಟ್ಗಳನ್ನು ಬಳಸಬಹುದಾಗಿದೆ.
14 ವರ್ಷ ಮತ್ತು ಮೇಲ್ಪಟ್ಟ ಕೊರೊನಾ ಶಂಕಿತರು ತಾವಾಗಿಯೇ ಸಂಗ್ರಹ ಮಾಡಿದ ತಮ್ಮ ಮೂಗಿನ ದ್ರವದ ಮಾದರಿಯನ್ನು ಪರೀಕ್ಷೆ ನಡೆಸಬಹುದಾಗಿದೆ. ಕೊರೊನಾ ಪರೀಕ್ಷೆ ಮಾಡುವವರು 14 ವರ್ಷಗಳಿಗಿಂತ ಸಣ್ಣ ವಯಸ್ಸಿನವರಾದರೆ ಆರೋಗ್ಯ ಕಾರ್ಯಕರ್ತರೇ ಮೂಗಿನ ದ್ರವ ಮಾದರಿಯನ್ನು ಸಂಗ್ರಹಿಸಬೇಕಾಗಿದೆ.