ನವದೆಹಲಿ, ನ.19 (DaijiworldNews/HR): 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ಗೆ ಎರಡು ಭಯೋತ್ಪಾದಕ ಪ್ರಕರಣಗಳಲ್ಲಿ ಪಾಕಿಸ್ತಾನದ ನ್ಯಾಯಾಲಯವು 10 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ) ಯ ಸಂಘಟನೆಯಾದ ಜಮಾಅತ್ ಉದ್ ದವಾ ಮುಖ್ಯಸ್ಥನಾಗಿದ್ದ ಹಫೀಜ್ ಸಯೀದ್ಗೆ ಭಯೋತ್ಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಜುಲೈ 17ರಂದು ಬಂಧಿಸಲಾಗಿದ್ದು, ಎರಡು ಕಡೆಗಳಲ್ಲಿ ಭಯೋತ್ಪಾದನೆಗೆ ಹಣ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 11 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಮತ್ತೆ ಎರಡು ಭಯೋತ್ಪಾದಕ ಪ್ರಕರಣಗಳಲ್ಲಿ 10 ವರ್ಷ ಶಿಕ್ಷೆ ವಿಧಿಸಿದೆ.
ಎರಡು ಭಯೋತ್ಪಾದಕ ಪ್ರಕರಣಗಳಿಗೆ ಸಂಬಂಧಿಸಿ ಲಾಹೋರ್ನ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಗುರುವಾರ ಜಮಾತ್-ಉದ್-ದವಾದ ನಾಲ್ಕು ನಾಯಕರಿಗೆ ಹಾಗೂ ಅದರ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಶಿಕ್ಷೆ ವಿಧಿಸಿದೆ ಎಂದು ತಿಳಿದು ಬಂದಿದೆ.