ವಾಷಿಂಗ್ಟನ್, ನ.20 (DaijiworldNews/PY): "ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದಾರೆ. ಅಲ್ಲದೇ, ಅವರು ನಂಬಲಸಾಧ್ಯವಾದ ಬೇಜವಾಬ್ದಾರಿತನವನ್ನು ತೋರಿಸುತ್ತಿದ್ದಾರೆ" ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
"ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ವಿಚಾರದ ಬಗ್ಗೆ ವಿಶ್ವದ ಇತರೆ ಭಾಗಗಳಿಗೆ ನಂಬಲಾಗದಷ್ಟು ಹಾನಿಕಾರಕ ಸಂದೇಶಗಳನ್ನು ಕಳುಹಿಸಲಾಗುತ್ತಿದೆ" ಎಂದು ಬಿಡೆನ್ ಅವರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಡೊನಾಲ್ಡ್ ಟ್ರಂಪ್ ಅವರ ಈ ನಡತೆಯು ಅವರು ಅತ್ಯಂತ ಬೇಜವಾಬ್ದಾರಿಯುತ ನಾಯಕ ಎನ್ನುವುದನ್ನು ನೆನಪಿಸುತ್ತದೆ. ಅಮೇರಿಕಾದ ಇತಿಹಾಸದಲ್ಲಿ ಅತ್ಯಂತ ಬೇಜವಾಬ್ದಾರಿಯುತ ಅಧ್ಯಕ್ಷರಲ್ಲಿ ಡೊನಾಲ್ಡ್ ಟ್ರಂಪ್ ಒಬ್ಬರು" ಎಂದಿದ್ದಾರೆ.
"ಡೊನಾಲ್ಡ್ ಟ್ರಂಪ್ ಅವರ ಉದ್ದೇಶ ನನಗೆ ತಿಳಿದಿಲ್ಲ. ಆದರೆ, ಇದು ಸಂಪೂರ್ಣವಾದ ಬೇಜವಾಬ್ದಾರಿ ತನದ ವರ್ತನೆ ಎಂದು ನಾನು ಭಾವಿಸುತ್ತೇನೆ. ಈ ಮನುಷ್ಯ ಹೇಗೆ ಯೋಚಿಸುತ್ತಾನೆಂದು ತಿಳಿಯುವುದು ಕಷ್ಟ. ಅವರು ಗೆದ್ದಿಲ್ಲ ಹಾಗೂ ಗೆಲ್ಲಲು ಹೋಗುವುದಿಲ್ಲ ಎಂದು ಅವರು ತಿಳಿದಿದ್ದಾರೆ ಎಂದು ನನಗೆ ವಿಶ್ವಾಸವಿದೆ. 2020ರ ಜನವರಿಯಲ್ಲಿ ನಾನು ಪ್ರಮಾಣವಚನ ಸ್ವೀಕರಿಸಲಿದ್ದೇನೆ" ಎಂದು ತಿಳಿಸಿದ್ದಾರೆ.
"ಟ್ರಂಪ್ ಅವರು ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಬಿಡೆನ್ ವಿರುದ್ದ ನಾನು ಗೆದ್ದಿದ್ದೇನೆ ಎಂದು ಹೇಳುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.