ಸಿಡ್ನಿ,ನ.20 (DaijiworldNews/HR): ಕೊರೊನಾ ಕಾಂಟಾಕ್ಟ್ ಟ್ರೇಸರ್ಗಳ ತಂಡಕ್ಕೆ ವ್ಯಕ್ತಿಯೊಬ್ಬ ಹೇಳಿದ ಒಂದು ಸುಳ್ಳು ಸೌತ್ ಆಸ್ಟ್ರೇಲಿಯಾದಲ್ಲಿ ಅತ್ಯಂತ ಕಠಿಣ ಲಾಕ್ ಡೌನ್ ಗೆ ಕಾರಣವಾಗಿದೆ.
ನ.11ರಿಂದ 6 ದಿನಗಳ ಕಾಲ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಲಾಕ್ ಡೌನ್ ಜಾರಿ ಮಾಡಿ ಆದೇಶ ನೀಡಲಾಗಿದ್ದು, ಎಲ್ಲಾ ವ್ಯಾಪಾರ ಉದ್ಯಮಗಳನ್ನು ಬಂದ್ ಮಾಡಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು.
ಇನ್ನು ಲಾಕ್ಡೌನ್ ಸಮಯದಲ್ಲಿ ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಹೊರಗೆ ಓಡಾಡುವ ಅವಕಾಶ ನೀಡಲಾಗಿತ್ತು.
ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಆಸ್ಟ್ರೇಲಿಯಾದ ಆಡಳಿತ ಮುಖ್ಯಸ್ಥ ಸ್ಟೀವನ್ ಮಾರ್ಷಲ್, ಕೊರೊನಾ ಸೋಂಕು ಹೆಚ್ಚು ಹರಡಲು ಪಿಝಾ ಬಾರ್ ನಿಂದಾಗಿ ಸೋಂಕು ತಗಲಿದ್ದ ಒಬ್ಬ ವ್ಯಕ್ತಿ ಹೇಳಿದ ಪ್ರಕಾರ ಪಿಝಾ ಖರೀದಿಸಲ್ಲಷ್ಟೆ ಬಂದಿದ್ದೆ ಎಂದು ತಿಳಿಸಿದ್ದ ಹಾಗಾಗಿ ಅವನಿಗೆ ಸ್ವಲ್ಪ ಹೊತ್ತು ಇದ್ದಾಗಲೇ ಆತನಿಗೆ ಸೋಂಕು ತಗಲಿದೆಯೆಂದರೆ ಇದು ಅಪಾಯಕಾರಿ ಎಂದು ತಿಳಿದು ಕಠಿಣ ಲಾಕ್ ಡೌನ್ ಹೇರಲಾಗಿತ್ತು, ಆದರೆ ನಿಜವಾಗಿ ಆತ ಅಲ್ಲಿಯೇ ಕೆಲಸ ಮಾಡಿದ್ದ ಹಾಗೂ ಆತನ ಸಹೋದ್ಯೋಗಿಗೂ ಕೊರೊನಾ ಪಾಸಿಟಿವ್ ಇತ್ತು ಎಂದು ನಂತರ ತಿಳಿದು ಬಂದಿದೆ ಎಂದು ತಿಳಿದಿದ್ದಾರೆ.