ಹಾಂಕಾಂಗ್, ನ.21 (DaijiworldNews/PY): ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ದೆಹಲಿಯಿಂದ ಆಗಮಿಸುವ ಏರ್ ಇಂಡಿಯಾ ವಿಮಾನಗಳ ಮೇಲೆ ಹಾಂಕಾಂಗ್ ಡಿ.3ರವರೆಗೆ ಹೇರಿದೆ.
"ಈ ವಾರದ ಪ್ರಾರಂಭದಲ್ಲಿ ದೆಹಲಿಯಿಂದ ಆಗಮಿಸಿದ ಕೆಲ ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು" ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕೊರೊನಾದ ಬಳಿಕ ಏರ್ ಇಂಡಿಯಾಕ್ಕೆ ಹಾಂಕಾಂಗ್ ಸರ್ಕಾರ ನಿಷೇಧ ಹೇರುತ್ತಿರುವುದು ಇದೇ ಈದನೇ ಬಾರಿಯಾಗಿದೆ.
ಆಗಸ್ಟ್ 18ರಿಂದ 31ರವರೆಗೆ, ಸೆಪ್ಟೆಂಬರ್ 20ರಿಂದ ಅಕ್ಟೋಬರ್ 3ರವರೆಗೆ, ಅಕ್ಟೋಬರ್ 17ರಿಂದ ಅಕ್ಟೋಬರ್ 30ರವರೆಗೆ ದೆಹಲಿಯಿಂದ ಬರುವ ಹಾಗೂ ಅಕ್ಟೋಬರ್ 28ರಿಂದ ನವೆಂಬರ್ 10ರ ತನಕ ಮುಂಬೈಯಿಂದ ಆಗಮಿಸುವ ಏರ್ ಇಂಡಿಯಾ ವಿಮಾನಕ್ಕೆ ಹಾಂಕಾಂಗ್ ಸರ್ಕಾರ ನಿಷೇಧ ಹೇರಿತ್ತು.
ಜುಲೈನಲ್ಲಿ ಹಾಂಕಾಂಗ್ ಸರ್ಕಾರ ಹೊರಡಿಸಿದ ನಿಯಮಗಳ ಪ್ರಕಾರ, ಪ್ರಯಾಣದ 72 ಗಂಟೆಗಳ ಒಳಗೆ ನೆಸಿದ ಪರೀಕ್ಷೆಯಿಂದ ಕೊರೊನಾ ನೆಗೆಟಿವ್ ಬಂದ ಪ್ರಮಾಣ ಪತ್ರವನ್ನು ಹೊಂದಿದ್ದರೆ ಮಾತ್ರವೇ ಭಾರತದ ಪ್ರಯಾಣಿಕರು ಹಾಂಕಾಂಗ್ಗೆ ಪ್ರಯಾಣಿಸಬಹುದು ಎಂದು ತಿಳಿಸಿತ್ತು. ಇದಲ್ಲದೇ, ಅಂತರಾಷ್ಟ್ರೀಯ ಪ್ರಯಾಣ ಮಾಡುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.
ಹಾಂಕಾಂಗ್ ಸರ್ಕಾರದ ನಿಯಮದ ಪ್ರಕಾರ, ಮಾತ್ರವಲ್ಲದೇ, ಫಿಲಿಪ್ಪೀನ್ಸ್, ರಷ್ಯಾ, ದಕ್ಷಿಣ ಆಫ್ರಿಕಾ, ಬ್ರಿಟನ್, ಕಜಕ್ಸ್ತಾನ್, ನೇಪಾಳ, ಬಾಂಗ್ಲಾದೇಶ, ಇಥಿಯೋಪಿಯ, ಫ್ರಾನ್ಸ್, ಇಂಡೊನೇಷ್ಯಾ, ಅಮೇರಿಕಾ ಹಾಗೂ ಪಾಕಿಸ್ತಾನದಿಂದ ಬರು ಪ್ರಯಾಣಿಕರೂ ಕೂಡಾ ಪ್ರಯಾಣಪೂರ್ವ ಕೊರೊನಾ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.