ವಾಷಿಂಗ್ಟನ್, ನ.21 (DaijiworldNews/HR): ಕೊರೊನಾ ರೋಗಿಗಳಲ್ಲಿ ಕಂಡುಬರುವ ಉರಿಯೂತ, ಶ್ವಾಸಕೋಶದ ಹಾನಿ ಹಾಗೂ ಬಹು ಅಂಗಾಂಗ ವೈಫಲ್ಯದಂತಹ ಸಮಸ್ಯೆಗಳಿಗೆ ಔಷಧವನ್ನು ಅಮೇರಿಕಾದಲ್ಲಿರುವ ಭಾರತ ಮೂಲದ ವಿಜ್ಞಾನಿ ಡಾ.ತಿರುಮಲದೇವಿ ಕನ್ನೆಗಂಟಿ ಅವರು ಕಂಡುಹಿಡಿದಿದ್ದಾರೆ.
ಡಾ.ತಿರುಮಲದೇವಿ ಕನ್ನೆಗಂಟಿ ಅವರು ತೆಲಂಗಾಣದಲ್ಲಿ ಹುಟ್ಟಿ ಬೆಳೆದಿದ್ದು, ವಾರಂಗಲ್ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಹಾಗೂ ಪಿಎಚ್ಡಿ ಪೂರ್ಣಗೊಳಿಸಿ ಬಳಿಕ 2007ರಲ್ಲಿ ಟೆನ್ನೆಸಿಯಲ್ಲಿರುವ ಸೇಂಟ್ ಜೂಡ್ ಚಿಲ್ಡ್ರನ್ಸ್ ರೀಸರ್ಚ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಈ ಕುರಿತು ಮಾತನಾಡಿರುವ ಡಾ.ತಿರುಮಲದೇವಿ ಕನ್ನೆಗಂಟಿ ಅವರು, ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತ ಸಮಸ್ಯೆ ಮತ್ತು ಅದಕ್ಕೆ ಕಾರಣವಾಗಿರುವ ಜೀವಕೋಶಗಳ ಕಾರ್ಯವಿಧಾನವನ್ನು ಅರ್ಥಮಾಡಿಕೊಂಡು ಪರಿಣಾಮಕಾರಿ ಚಿಕಿತ್ಸಾ ತಂತ್ರಗಳನ್ನು ಕಂಡುಹಿಡಿಯಲಾಗಿದೆ ಎಂದು ಹೇಳಿದ್ದಾರೆ.