ಟೊರಾಂಟೊ,ನ.21 (DaijiworldNews/HR): ಭಾರತದ ವಾರಣಾಸಿ ದೇವಾಲಯದಿಂದ ಶತಮಾನದ ಹಿಂದೆ ಕಳವಾಗಿದ್ದ ಅನ್ನಪೂರ್ಣ ದೇವತೆಯ ವಿಗ್ರಹ ಇದೀಗ ಕೆನಡಾ ರೆಜಿನ್ ವಿಶ್ವವಿದ್ಯಾಲಯದ ಮೆಕೆಂಜಿ ಆರ್ಟ್ ಗ್ಯಾಲರಿಯಲ್ಲಿ ಪತ್ತೆಯಾಗಿದ್ದು, ಅದನ್ನು ಶೀಘ್ರವೇ ಭಾರತಕ್ಕೆ ಹಿಂತಿರುಗಿಸುವುದಾಗಿ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ವಿಗ್ರಹ ಹಿಂದಿರುಗಿಸುವ ವಿಚಾರವನ್ನು ವಿಶ್ವವಿದ್ಯಾಲಯದ ಹಂಗಾಮಿ ಅಧ್ಯಕ್ಷ ಮತ್ತು ಉಪ ಕುಲಪತಿ ಡಾ.ಥಾಮಸ್ ಚೇಸ್ ಅವರು ಕೆನಡಾದಲ್ಲಿರುವ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಜೊತೆ ಚರ್ಚಿಸಿ, ನ.19ರಂದು ವಿಗ್ರಹವನ್ನು ವಾಪಸ್ ನೀಡುವ ಸಮಾರಂಭ ಕೂಡ ನಡೆದಿದ್ದು, ಶೀಘ್ರದಲ್ಲೇ ವಿಗ್ರಹವನ್ನು ಭಾರತಕ್ಕೆ ತಲುಪಿಸುವುದಾಗಿ ವಿವಿ ಪ್ರಕಟಣೆ ಹೇಳಿದೆ.
ಇನ್ನು ಈ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸುತ್ತಿರುವ ರೆಜಿನಾ ವಿಶ್ವವಿದ್ಯಾಲಯದ ಕಾರ್ಯವು ಸ್ವಾಗತಾರ್ಹವಾಗಿದ್ದು,ಪುರಾತನವಾದ ಈ ವಿಗ್ರಹ ಶೀಘ್ರವೇ ಸ್ವದೇಶಕ್ಕೆ ವಾಪಾಸಾಗುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಅಜಯ್ ಬಿಸಾರಿಯಾ ಹೇಳಿದ್ದಾರೆ.