ಜೋಹಾನ್ಸ್ ಬರ್ಗ್, ನ.23 (DaijiworldNews/HR): ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗ ಸತೀಶ್ ಧುಪೇಲಿಯಾ(66) ಕೊರೊನಾಗೆ ಬಲಿಯಾಗಿದ್ದಾರೆ.
ಸತೀಶ್ ಅವರು ನ್ಯೂಮೋನಿಯಾದಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸಹೋದರಿ ಉಮಾ ಧುಪೇಲಿಯಾ ತಿಳಿಸಿದ್ದಾರೆ.
ಉಮಾ ಧುಪೇಲಿಯಾ ಮತ್ತು ಕೀರ್ತಿ ಮೆನನ್ ಎಂಬ ಇಬ್ಬರು ಸಹೋದರಿಯರನ್ನು ಸತೀಶ್ ಅಗಲಿದ್ದಾರೆ.
ಇನ್ನು ಸತೀಶ್ ಅವರು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೋಗ್ರಾಫರ್ ಮತ್ತು ಛಾಯಾಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದರು, ಜೊತೆಗೆ ಡರ್ಬನ್ನ ಬಳಿಯ ಫೀನಿಕ್ಸ್ ಸೆಟಲ್ಮೆಂಟ್ನಲ್ಲಿ ಮಹಾತ್ಮರು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಗಾಂಧಿ ಅಭಿವೃದ್ಧಿ ಟ್ರಸ್ಟ್ಗೆ ಸಹಾಯ ಮಾಡುವಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ.