ವಾಷಿಂಗ್ಟನ್, ನ.25 (DaijiworldNews/PY): ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾನ್ಯ ಸೇವೆಗಳ ನಿರ್ವಾಹಕ (ಜಿಎಸ್ಎ) ಎಮಿಲಿ ಮರ್ಫಿ ಅವರು ಜೊ ಬಿಡೆನ್ ಅವರಿಗೆ ಪತ್ರ ಬರೆದಿದ್ದು, "ಡೊನಾಲ್ಡ್ ಟ್ರಂಪ್ ಅವರಿ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಪ್ರಾರಂಭಿಸಲು ತಯಾರಿಸಿದ್ದಾರೆ" ಎಂದು ಉಲ್ಲೇಖಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಎಮಿಲಿ ಮರ್ಫಿ ಅವರು, "ಈ ತೀರ್ಮಾನ ತೆಗೆದುಕೊಳ್ಳುವಂತೆ ಯಾರೂ ಕೂಡಾ ಒತ್ತಾಯ ಮಾಡಲಿಲ್ಲ. ಈ ತೀಮಾನವನ್ನು ಕಾನೂನು ಹಾಗೂ ಲಭ್ಯವಿರುವ ಆಧಾರದಲ್ಲಿ ಸ್ವತಂತ್ರವಾಗಿ ತೆಗೆದುಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ಈ ನಡುವೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್ ಅವರು, "ಜಿಎಸ್ಎಯ ದೇಶದ ಮೇಲಿನ ನಿಷ್ಠೆಗಾಗಿ ಎಮಿಲಿ ಮರ್ಫಿ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಚುನಾವಣಾ ಅಕ್ರಮದ ವಿರುದ್ದ ನಾನು ಹೋರಾಟ ನಡೆಸುತ್ತೇನೆ. ಇದರಲ್ಲಿ ನಾನು ಮೇಲುಗೈ ಸಾಧಿಸುವೆ. ದೇಶದ ಹಿತದೃಷ್ಟಿಗಾಗಿ ನಿಯಮಾನುಸಾರವಾಗಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದನ್ನು ನಾನು ಎಮಿಲಿ ಅವರಿಗೆ ಸಲಹೆ ನೀಡುತ್ತೇನೆ. ಅಲ್ಲದೇ, ನನ್ನ ತಂಡ ಕೂಡಾ ಇದನ್ನೇ ಪಾಲನೆ ಮಾಡಲಿದೆ" ಎಂದು ಹೇಳಿದ್ದಾರೆ.