ಲಂಡನ್, ನ. 27 (DaijiworldNews/HR): ಕೊರೊನಾ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದ್ದು ಅದರ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಹೆಚ್ಚುವರಿ ಪ್ರಯೋಗ ನಡೆಸುವ ಸಾಧ್ಯತೆಯಿದೆ ಎಂದು ಅಸ್ಟ್ರಾಜೆನೆಕಾ ಕಂಪನಿ ತಿಳಿಸಿದೆ.
ಕೊರೊನಾ ಲಸಿಕೆಯನ್ನು ಅಸ್ಟ್ರಾಜೆನೆಕಾ ಕಂಪನಿಯು ಸಿದ್ಧಪಡಿಸಿದ್ದು, ಅದರ ರಕ್ಷಣೆಯ ಮಟ್ಟ ಮತ್ತು ಪಾರದರ್ಶಕತೆಯ ಕೊರತೆಯ ಬಗ್ಗೆ ಕೆಲವು ಪ್ರಶ್ನೆಗಳು ಕೇಳಬಂದಿದ್ದವು. ಆ ಹಿನ್ನೆಲೆಯಲ್ಲಿ ಲಸಿಕೆಯ ಗುಣಮಟ್ಟ ಹಾಗೂ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಹೆಚ್ಚುವರಿ ಪ್ರಯೋಗ ನಡೆಸುವ ಸಾಧ್ಯತೆ ಇದೆ ಎಂದು ಕಂಪನಿ ತಿಳಿಸಿದೆ.
ಇನ್ನು ಕೊರೊನಾ ತಡೆಗಟ್ಟುವಲ್ಲಿ ಅಸ್ಟ್ರಾಜೆನೆಕಾ ಸಿದ್ಧಪಡಿಸಿರುವ ಕೊರೊನಾ ಲಸಿಕೆಯು ಶೇ.70 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಸ್ಟ್ರಾಜೆನೆಕಾ ಕಂಪನಿಯು ವಾರದ ಹಿಂದೆ ಹೇಳಿತ್ತು.
ಲಸಿಕೆಯನ್ನು ವಿಶ್ವದ ಎಲ್ಲ ಔಷಧ ನಿಯಂತ್ರಕ ಸಂಸ್ಥೆಗಳಿಗೆ ನೀಡುವುದಾಗಿ ಅಸ್ಟ್ರಾಜೆನೆಕಾ ಕಂಪೆನಿಯು ತಿಳಿಸಿದೆ.