ಅಬುಧಾಬಿ, ನ.27 (DaijiworldNews/PY): "ಬದಲಾಗುತ್ತಿರುವ ವಿಶ್ವದಲ್ಲಿ ಭಾರತ, ಯುಎಇ ರಾಷ್ಟ್ರಗಳು ಒಂದಾಗಿ ಕಾರ್ಯ ನಿರ್ವಹಿಸಬೇಕಿದೆ" ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದರು.
ಎರಡು ದಿನಗಳ ಕಾಲ ಯುಎಇ ಭೇಟಿಯ ಸಂದರ್ಭ ಅಲ್ಲಿನ ವಿದೇಶಾಂಗ ಸಚಿವ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, "ಬದಲಾವಣೆ ಹೊಂದುತ್ತಿರುವ ವಿಶ್ವದಲ್ಲಿ ಭಾರತ ಹಾಗೂ ಯುಎಇ ರಾಷ್ಟ್ರಗಳು ಒಂದಾಗಿ ಕೂಡ ಕೆಲಸ ಮಾಡಬೇಕಿದೆ" ಎಂದಿದ್ದಾರೆ.
ಭೇಟಿಯ ಸಂದರ್ಭ, "ವ್ಯಾಪಾರ ಸೇರಿದಂತೆ ಇಂಧನ, ಮೂಲಸೌಕರ್ಯ, ಹೂಡಿಕೆ, ರಕ್ಷಣೆ ಹಾಗೂ ಆಹಾರ ಭದ್ರತೆ ಹಾಗೂ ವಿವಿಧ ಕ್ಷೇತ್ರಗಳ ಸಹಕಾರ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಗಿದೆ" ಎಂದು ತಿಳಿಸಿದ್ದಾರೆ.
"ಭಾರತ ಹಾಗೂ ಯುಎಇಗೆ ಕೊರೊನಾದ ಅನುಭವಗಳು ಪಾಠ ಕಲಿಸಿವೆ. ಈ ನಿಟ್ಟಿನಲ್ಲಿ ಆರೋಗ್ಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ" ಎಂದು ಹೇಳಿದ್ದಾರೆ.