ಕೊಲೊಂಬೊ,ನ. 27 (DaijiworldNews/HR): ದಶಕಗಳ ಕಾಲ ಶ್ರೀಲಂಕಾದಲ್ಲಿ ನಡೆದ ಅಂತರ್ಯುದ್ಧದಲ್ಲಿ ಕೊಲ್ಲಲ್ಪಟ್ಟ ಬಂಡುಕೋರ 'ತಮಿಳು ವೀರರ ಸ್ಮರಣೆಯನ್ನು ಶುಕ್ರವಾರ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಸರ್ಕಾರ ನಿಷೇಧಿಸಿದೆ.
ಶ್ರೀಲಂಕಾದ ಭದ್ರತಾ ಪಡೆಗಳಿಂದ ಹತರಾದ 'ದಿ ರೆಬಲ್ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಳಮ್'ನ ಮೊದಲ ನಾಯಕ ಲೆಫ್ಟಿನೆಂಟ್ ಶಂಕರ್ ಅವರ ನೆನಪಿಗಾಗಿ ನವೆಂಬರ್ 27 ಅನ್ನು 'ವೀರರ ದಿನ'ವಾಗಿ ಆಚರಿಸಲಾಗುತ್ತಿದೆ.
ಶ್ರೀಲಂಕಾದಲ್ಲಿ ತಮಿಳರು ಯುದ್ಧದಲ್ಲಿ ಹತರಾದ ತಮ್ಮ ಕುಟುಂಬಸ್ಥರರನ್ನು ಸ್ಮರಿಸಲು ಹಲವು ವರ್ಷಗಳ ಕಾಲ ಅವಕಾಶವನ್ನೇ ನೀಡಲಾಗಿರಲಿಲ್ಲ. ಆದರೆ 2015 ರಲ್ಲಿ ಮಹಿಂದಾ ರಾಜಪಕ್ಸೆ ಅಧಿಕಾರದಿಂದ ಹೊರಬಿದ್ದ ನಂತರ 'ವೀರರ ದಿನ' ಸಮಾರಂಭಗಳನ್ನು ಆಚರಿಸಲಾಗುತ್ತಿತ್ತು.
ಇನ್ನು ತಮಿಳರು ಬಹುಸಂಖ್ಯಾತರಾಗಿರುವ ಶ್ರೀಲಂಕಾದ ಉತ್ತರ ನ್ಯಾಯಾಲಯಕ್ಕೆ ಕಳೆದ ವಾರ ಅರ್ಜಿ ಸಲ್ಲಿಸಿರುವ ರಾಜಪಕ್ಸೆ ಸರ್ಕಾರ ತಮಿಳು ವೀರರ ಸ್ಮರಣೆಗೆ ಇದ್ದ ಅವಕಾಶಕ್ಕೆ ತಡೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.