ಕೊಲಂಬೊ,ನ. 28 (DaijiworldNews/HR): ಕಡಲ ತೀರದ ಸುರಕ್ಷತೆ ಕುರಿತಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಮಾಲ್ಡೀವ್ಸ್ನ ರಕ್ಷಣಾ ಸಚಿವ ಮರಿಯಾ ದಿದಿ ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ಕುರಿತು ಟ್ವೀಟ್ ಮಾಡಿರುವ ಮಾಲ್ಡೀವ್ಸ್ನ ಭಾರತೀಯ ರಾಯಭಾರ ಕಚೇರಿಯು, ಎರಡು ದೇಶಗಳ ನಡುವೆ ಕಡಲ ತೀರದ ಸುರಕ್ಷತೆ ಕುರಿತು ಸುದೀರ್ಘವಾದ ಚರ್ಚೆ ನಡೆದಿದೆ ಎಂದು ತಿಳಿಸಿದೆ.
ಇನ್ನುಒಳನಾಡು, ಕಡಲ ತೀರದ ಸುರಕ್ಷತೆ ಕುರಿತಂತೆ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವಣ ತ್ರಿಪಕ್ಷೀಯ ಮಾತುಕತೆಯ ಭಾಗವಾಗಿ ಡೊಭಾಲ್ ಮತ್ತು ದಿದಿ ಅವರ ನಡುವೆ ಸಂವಾದ ನಡೆಯಿತು.
ಕಡಲ ತೀರದ ಸುರಕ್ಷತೆ ಕುರಿತು ನಾಲ್ಕನೇ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಣ ತ್ರಿಪಕ್ಷೀಯ ಮಾತುಕತೆಯನ್ನು ಶ್ರೀಲಂಕಾವು, ಭಾರತ ಮತ್ತು ಮಾಲ್ಡೀವ್ಸ್ ಸಹಯೋಗದಲ್ಲಿ ಆಯೋಜಿಸಿದೆ.