ವಾಷಿಂಗ್ಟನ್, ನ.29 (DaijiworldNews/PY): ಲಡಾಖ್ನ ಭಾರತದ ಗಡಿಯಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಿರುವ ವರದಿಗಳ ವಿಚಾರವಾಗಿ ಅಮೇರಿಕಾದ ಪ್ರಭಾವಿ ಸಂಸದರೊಬ್ಬರು ಆತಂಕ ವ್ಯಕ್ತಪಡಿಸಿದ್ದು, "ಭಾರತದ ಗಡಿಯಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎನ್ನುವ ವರದಿಗಳು ಒಂದು ವೇಳೆ ನಿಜವೇ ಆಗಿದ್ದರೆ, ಅದು ಚೀನಾದ ಪ್ರಚೋದನಕಾರಿ ಕ್ರಮ" ಎಂದಿದ್ದಾರೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡೆಮಾಕ್ರಟಿಕ್ ಪಕ್ಷದ ಸಂಸದ ರಾಜಾ ಕೃಷ್ಣಮೂರ್ತಿ ಅವರು, "ಚೀನಾವು ಭಾರತದ ಗಡಿಯಲ್ಲಿ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎನ್ನುವ ವರದಿಗಳು ಒಂದು ವೇಳೆ ನಿಜವೇ ಆಗಿದ್ದಲ್ಲಿ, ಅದು ಚೀನಾದ ಪ್ರಚೋದನಕಾರಿಯಾದ ಕ್ರಮವಾಗಿದೆ. ಈ ಕೃತ್ಯವು ಅದು ದಕ್ಷಿಣ ಚೀನಾ ಸಮುದ್ರದಲ್ಲಿ ವರ್ತಿಸುತ್ತಿರುವ ರೀತಿಯಲ್ಲಿದೆ" ಎಂದು ಹೇಳಿದ್ದಾರೆ.
:ಭಾರತ ಹಾಗೂ ಚೀನಾ ಗಡಿ ವಿಚಾರದಲ್ಲಿ ಕಳೆದ ಮೇ ತಿಂಗಳಿನಿಂದಲೂ ಉದ್ವಿಘ್ನತೆ ಇದ್ದು, ಇದಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ನಿವಾರಿಸಲು ಹಲವು ಮಟ್ಟದಲ್ಲಿ ಮಾತುಕತೆ ಸಮಾಲೋಚನೆ ನಡೆದಿವೆ.ಆದರೂ ಕೂಡಾ ಈ ವಿಚಾರವಾಗಿ ಸಮಸ್ಯೆ ಬಗೆಹರಿದಿಲ್ಲ" ಎಂದಿದ್ದಾರೆ.
"ಚೀನಾವು ಭಾರತದ ಗಡಿಯಲ್ಲಿ ಪ್ರದರ್ಶಿಸುತ್ತಿರುವ ನಡವಳಿಕೆಯು, ದಕ್ಷಿಣ ಚೀನಾ ಸಮುದ್ರದಲ್ಲಿ ದ್ವೀಪ ನಿರ್ಮಿಸಲು ಹೊರಟಂತಹ ಅದರ ನಡವಳಿಕೆಗೆ ಸರಿಯಾಗುತ್ತದೆ. ಅವರು ಅಲ್ಲಿನ ವ್ಯವಸ್ಥೆಯನ್ನು ತೊಂದರೆಗೀಡು ಮಾಡಿದ್ದಾರೆ. ಚೀನಾದ ನಿರ್ಮಾಣ ಕಾರ್ಯಗಳಿಗೆ ನಾವು ಉಪಗ್ರಹ ಚಿತ್ರಗಳನ್ನು ಆಧಾರವಾಗಿ ಬಳಕೆ ಮಾಡಿಕೊಂಡಿದ್ದೇವೆ" ಎಂದಿದ್ದಾರೆ.