ಘಜ್ನಿ, ನ. 29 (DaijiworldNews/MB) : ಅಫ್ಘಾನಿಸ್ತಾನದಲ್ಲಿ ಸೇನಾ ನೆಲೆಯನ್ನು ಪುಲ್ವಾಮ ಮಾದರಿಯಲ್ಲಿ ಗುರಿಯಾಗಿಸಿಕೊಂಡು ಆತ್ಮಾಹುತಿ ಕಾರುಬಾಂಬ್ ಅನ್ನು ಸ್ಫೋಟಿಸಲಾಗಿದ್ದು ಕನಿಷ್ಠ 26 ಸೈನಿಕರು ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
26 ಶವಗಳು ಈವರೆಗೆ ದೊರೆತಿದ್ದು 17 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ದಾಳಿಯು ಪೂರ್ವ ಅಫ್ಘಾನಿಸ್ತಾನದ ಘಜ್ನಿಯಲ್ಲಿ ನಡೆದಿದ್ದು ಈ ಪ್ರದೇಶದಲ್ಲಿ ತಾಲಿಬಾನ್ ಉಗ್ರ ಪಡೆಗಳು ಮತ್ತು ಸೇನೆ ನಡುವೆ ನಿರಂತರವಾಗಿ ಘರ್ಷನೆ ನಡೆಯುತ್ತಲ್ಲೇ ಇರುತ್ತದೆ. ಈ ದಾಳಿಯು ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಅತಿ ದೊಡ್ಡ ದಾಳಿ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಘಜ್ನಿ ಆಸ್ಪತ್ರೆಯ ನಿರ್ದೇಶಕ ಬಾಜ್ ಮೊಹಮ್ಮದ್ ಹೆಮ್ಮತ್, ''ಈವರೆಗೆ 26 ಶವಗಳು ಸಿಕ್ಕಿದೆ. 17 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಕೂಡಾ ಭದ್ರತಾ ಸಿಬ್ಬಂದಿಗಳು'' ಎಂದು ತಿಳಿಸಿದ್ದಾರೆ.