ಅಬುಜಾ, ನ. 30 (DaijiworldNews/HR): ರೈತರು ಸೇರಿದಂತೆ 110 ಜನರು ಈಶಾನ್ಯ ನೈಜೀರಿಯಾದಲ್ಲಿ ನಡೆದ ಘೋರ ಹತ್ಯಾಕಾಂಡದಲ್ಲಿ ಬಲಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘೋರ ಹತ್ಯಾಕಾಂಡವು ಸಂಘರ್ಷ ಪೀಡಿತ ಬೊರ್ನೊ ರಾಜ್ಯದ ರಾಜಧಾನಿಯಾದ ಮೈಡುಗುರಿ ಬಳಿಯ ಜೆರೆ ಸ್ಥಳೀಯ ಸರ್ಕಾರಿ ಪ್ರದೇಶದ ಕೊಶೋಬೆ ಗ್ರಾಮ ಮತ್ತು ಇತರ ಗ್ರಾಮೀಣ ಸಮುದಾಯಗಳಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಇನ್ನು ಉಗ್ರರು ಈ ದಾಳಿಯನ್ನು ಹೊಲಗಳನ್ನು ಕೊಯ್ಲು ಮಾಡುತ್ತಿದ್ದ ನಾಗರಿಕ ಪುರುಷರು ಮತ್ತು ಮಹಿಳೆಯರ ಮೇಲೆ ನಡೆಸಿದ್ದು, ಅನೇಕ ಮಹಿಳೆಯರನ್ನು ಅಪಹರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.