ವಿಶ್ವಸಂಸ್ಥೆ, ಡಿ.01 (DaijiworldNews/PY): "ಭಾರತವು, ಮಲೇರಿಯಾ ರೋಗದ ವಿರುದ್ಧದ ಹೋರಾದಲ್ಲಿ ಉತ್ತಮವಾದ ಪ್ರಗತಿ ಸಾಧಿಸಿದೆ. ಏಷ್ಯಾ ಹಾಗೂ ಆಗ್ನೇಯ ರಾಷ್ಟ್ರಗಳಲ್ಲೇ ಅತೀ ಕಡಿಮೆ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರವಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
"ಭಾರತದಲ್ಲಿ 2000ರಲ್ಲಿ 2 ಕೋಟಿ ಮಲೇರಿಯಾ ಪ್ರಕರಣಗಳಿದ್ದವು. ಕಳೆದ ವರ್ಷ ಇದು 5.6ಕ್ಕೆ ಇಳಿಕೆಯಾಗಿದೆ" ಎಂದು ಡಬ್ಲ್ಯೂಎಚ್ಒ ತಿಳಿಸಿದೆ.
ನ.30ರ ಸೋಮವಾರದಂದು ಬಿಡುಗಡೆಯಾದ ವಿಶ್ವ ಮಲೇರಿಯಾ ವರದಿ -2020ರ ವರದಿಯಲ್ಲಿ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಈ ವರದಿಯ ಪ್ರಕಾರ, "2019ರಲ್ಲಿ ಸುಮಾರು 22 ಕೋಟಿ ಮಲೇರಿಯಾ ಪ್ರಕರಣಗಳಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕವಾಗಿ ಈ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಈ ರೋಗದಿಂದಾಗಿ ಕಳೆದ ವರ್ಷ ಸುಮಾರು 4.09 ಲಕ್ಷ ಹಾಗೂ 2018ರಲ್ಲಿ 4.11 ಲಕ್ಷ ಜನ ಮೃತಪಟ್ಟಿದ್ದರು" ಎಂದು ವರದಿ ವಿವರಿಸಿದೆ.
"ಮಲೇರಿಯಾ ರೋಗ ನಿಯಂತ್ರಣದಲ್ಲಿ ಆಗ್ನೇಯ, ಏಷ್ಯಾ ರಾಷ್ಟ್ರಗಳು ಉತ್ತಮವಾದ ಪ್ರಗತಿ ಸಾಧಿಸಿದ್ದು, ಸಾವಿನ ಪ್ರಕರಣಗಳು ಶೇ 73-74ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಮಲೇರಿಯಾ ಪಕ್ರಗಳು ಕಡಿಮೆಯಾಗಿದೆ" ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
"ಜಾಗತಿಕವಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಮಲೇರಿಯಾ ಪ್ರಕರಣಗಳು ಶೇ 3ರಷ್ಟು ಇವೆ. ಕಳೆದ ಎರಡು ವರ್ಷಗಳಲ್ಲಿ ಮಲೇರಿಯಾ ವಿರುದ್ಧದ ಹೋರಾಟದಲ್ಲು ಭಾರತವು ಸಾಧಿಸುರುವ ಪ್ರಗತಿಯನ್ನು ಡಬ್ಲ್ಯುಎಚ್ಒ ಗಮನಿಸಿದ್ದು, 2000-2019ರ ನಡುವೆ ಮಲೇರಿಯಾದಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿದೆ. 2000ದಲ್ಲಿ ಮಲೇರಿಯಾದಿಂದ 29,500 ಮಂದಿ ಸಾವನ್ನಪ್ಪಿದ್ದು, ಕಳೆದ ವರ್ಷ ಸುಮಾರು 7,700 ಮಂದಿ ಮೃತಪಟ್ಟಿದ್ದಾರೆ" ಎಂದು ವರದಿ ಹೇಳಿದೆ.