ವಾಷಿಂಗ್ಟನ್,ಡಿ. 01 (DaijiworldNews/HR): ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವೂರ್ ರಾಣಾ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದು, ಆತನ ಬಿಡುಗಡೆಯನ್ನು ಅಮೇರಿಕಾ ಸರ್ಕಾರ ವಿರೋಧಿಸಿ ಆತ ಪರಾರಿಯಾಗುವ ಸಾಧ್ಯತೆ ಇರುವುದರಿಂದ ಬಿಡುಗಡೆ ಸರಿಯಲ್ಲ ಎಂದು ಕ್ಯಾಲಿಫೋರ್ನಿಯಾದ ಫೆಡರಲ್ ಕೋರ್ಟ್ಗೆ ತಿಳಿಸಿದೆ.
ತಹಾವ್ವೂರ್ ರಾಣಾ(59)ನನ್ನು ಬಂಧಿಸಿ, ತಮ್ಮ ದೇಶಕ್ಕೆ ಹಸ್ತಾಂತರಿಸುವಂತೆ ಅಮೇರಿಕಾವನ್ನು ಭಾರತ ಕೇಳಿತ್ತು. ಈ ಕಾರಣ ಆತನನ್ನು ಜೂನ್ 10ರಂದು ಲಾಸ್ ಏಂಜಲೀಸ್ನಲ್ಲಿ ಬಂಧಿಸಲಾಗಿತ್ತು.
ಇನ್ನು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಣಾನನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ರಾಣಾ ಪರ ವಕೀಲರು ಕೋರಿದ್ದಾರೆ. ಲಾಸ್ ಏಂಜಲೀಸ್ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಎದುರು ಅಮೇರಿಕಾ ಸರ್ಕಾರದ ಅಟಾರ್ನಿ ನಿಕೋಲಾ ಟಿ ಹಾನ್ನಾ ಅವರು ರಾಣಾ ಬಿಡುಗಡೆಯನ್ನು ವಿರೋಧಿಸಿದ್ದಾರೆ.
ರಾಣಾ ಪರಾರಿಯಾಗಿ ಸಮುದಾಯಕ್ಕೆ ಯಾವುದೇ ರೀತಿಯಲ್ಲೂ ಅಪಾಯ ಮಾಡುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದರೆ ಮಾತ್ರ ವಿಶೇಷ ಸಂದರ್ಭದಲ್ಲಿ ಆತನಿಗೆ ಜಾಮೀನು ನೀಡಬಹುದು ಎಂದು ಅಟಾರ್ನಿ ನಿಕೋಲಾ ಟಿ ಹಾನ್ನಾ ಹೇಳಿದ್ದಾರೆ.