ವಾಷಿಂಗ್ಟನ್, ಡಿ.02 (DaijiworldNews/PY): "ಅಮೇರಿಕಾ ಮತ್ತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಹಾಗೂ ತುರ್ತಾಗಿ ಈ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವುದು ಅತ್ಯಗತ್ಯ" ಎಂದು ಅಮೇರಿಕಾದ ಖಜಾನೆ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿರುವ ಜಾನೆಟ್ ಎಲೆನ್ ತಿಳಿಸಿದ್ದಾರೆ.
"ಇದರಲ್ಲಿ ನಿರ್ಲಕ್ಷ್ಯ ತೋರಿದರೆ, ದೇಶದ ಆರ್ಥಿಕ ಪರಿಸ್ಥಿತಿಯನ್ನು ನಾವು ಇನ್ನೂ ಹೆಚ್ಚಿನ ವಿನಾಶಕ್ಕೆ ದೂಡಿದಂತಾಗುತ್ತದೆ" ಎಂದಿದ್ದಾರೆ.
ಡೆಲಾವೇರ್ನ ವಿಲ್ಮಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾವು ಇದೀಗ ಮತ್ತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಕೊರೊನಾ ಸಾಂಕ್ರಾಮಿಕ ಹಾಗೂ ಅದರ ಆರ್ಥಿಕ ಕುಸಿತವು ಅಮೇಕಾದ ಜನರಿಗೆ ಹೆಚ್ಚಿನ ಹಾನಿಯುಂಟುಮಾಡಿದೆ" ಎಂದು ಹೇಳಿದ್ದಾರೆ.
"ಜೀವನ ಕಳೆದುಕೊಂಡು, ಉದ್ಯೋಗ ಕಳೆದುಕೊಂಡು, ಎಷ್ಟೋ ಮಂದಿ ಜನರು ಆಹಾರವಿಲ್ಲದೇ ಪರದಾಡುವಂತಾಗಿದೆ. ಇದು ಅಮೇರಿಕಾದ ದುರಂತ" ಎಂದಿದ್ದಾರೆ.
"ಈ ಬಿಕ್ಕಟ್ಟನ್ನು ಎದುರಿಸಲು ಎಲೆನ್ ಅವರಿಗಿಂತ ಯಾರೂ ಉತ್ತಮವಾಗಿ ಸಿದ್ಧರಿಲ್ಲ. ಎಲೆನ್ ಅವರು ದೇಶದ ಪ್ರತಿಭಾವಂತ ಆರ್ಥಿಕ ತಜ್ಞೆ ಹಾಗೂ ಚಿಂತಕಿಯೂ ಆಗಿದ್ದಾರೆ" ಎಂದು ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರು ಹೇಳಿದ್ದಾರೆ.
"ನೀತಿ ನಿರೂಪಣೆ, ಆಡಳಿತದ ವಿವಿಧ ಸ್ತರಗಳಲ್ಲಿ ಎದುರಾಗುವ ಕ್ಲಿಷ್ಟಕರ ಸಂದರ್ಭಗಳನ್ನು ಭಾರತದ ಮೂಲದ ಅಮೇರಿಕನ್ ನೀರಾ ಟಂಡನ್ ಅವರು ನಿಭಾಯಿಸುವಂತ ಅನುಭವ ಹೊಂದಿದ್ದಾರೆ" ಎಂದು ತಿಳಿಸಿದ್ದಾರೆ.
"ನೀರಾ ಟಂಡನ್ ಅವರು ಕೊರೊನಾ ನಿಯಂತ್ರಣ ಸೇರಿದಂತೆ ಆರ್ಥಿಕತೆಗೆ ಪುನಶ್ಚೇತನಕ್ಕೆ ಸಹಕಾರಿಯಾಗುವಂತ ಬಜೆಟ್ ಅನ್ನು ರೂಪಿಸಲಿದ್ದಾರೆ" ಎಂದು ಹೇಳಿದ್ದಾರೆ.