ವಾಷಿಂಗ್ಟನ್, ಡಿ.02 (DaijiworldNews/PY): ಭಾರತೀಯ-ಅಮೇರಿಕನ್ ಮಜು ವರ್ಗೀಸ್ ಅವರನ್ನು ಅಮೇರಿಕಾದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಚಟುವಟಿಕೆಗಳ ನಿರ್ವಹಣೆಗಾಗಿ ರಚಿಸಲಾದ ನಾಲ್ವರು ಸದಸ್ಯರ ಅಧ್ಯಕ್ಷೀಯ ಉದ್ಘಾಟನಾ ಸಮಿತಿಗೆ ನೇಮಕ ಮಾಡಲಾಗಿದೆ.
ಅಮೇರಿಕಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬಿಡೆನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ಈ ಸಮಿತಿಗೆ ಮಜು ಅವರನ್ನು ನೇಮಕ ಮಾಡಿದ್ದಾರೆ.
ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟೋನಿ ಅಲೆನ್, ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮಜು ವರ್ಗೀಸ್, ಉಪ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಎರಿನ್ ವಿಲ್ಸನ್ ಮತ್ತು ಉಪ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯವನ್ನಾ ಕ್ಯಾನ್ಸಲಾ ಅವರನ್ನು ನೇಮಕ ಮಾಡಲಾಗಿದೆ.
"ಅಧಿಕಾರ ಸ್ವೀಕಾರದ ಉದ್ಘಾಟನಾ ಚಟುವಟಿಕೆಗಳನ್ನು ಯೋಜಿಸುವ ತಂಡವನ್ನು ಮುನ್ನಡೆಸಲು ಅವಕಾಶ ದೊರೆತಿರುವುದು ಒಂದು ಗೌರವ. ಆದರೆ ಅಮೇರಿಕನ್ನರ ಆರೋಗ್ಯ ಹಾಗೂ ಸುರಕ್ಷತೆಯನ್ನು ರಕ್ಷಿಸುವ ಬದ್ಧತೆಯನ್ನು ಉಳಿಸಿಕೊಂಡು ನಮ್ಮ ರಾಷ್ಟ್ರದ ಶಕ್ತಿ ಹಾಗೂ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತದೆ" ಎಂದು ವರ್ಗೀಸ್ ತಿಳಿಸಿದ್ದಾರೆ.