ವಾಷಿಂಗ್ಟನ್, ಡಿ.04 (DaijiworldNews/HR): ಆಫ್ರಿಕಾ ಮೂಲದ ಗ್ರೆಗೊರಿ ಮೀಕ್ಸ್ ಅವರನ್ನು ಅಮೇರಿಕಾ - ಭಾರತದ ವಿದೇಶಾಂಗ ನೀತಿ ರೂಪಿಸುವ ಕೆಳಮನೆಯ ಸಂಸತ್ತಿನ ವ್ಯವಹಾರಗಳ ಸಮಿತಿಗೆ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಮೊದಲ ಬಾರಿಗೆ ಕೆಳಮನೆ ಸದನ ಸಮಿತಿಯ ಅಧ್ಯಕ್ಷರಾಗಿ ಈ ಮೂಲಕ ಆಫ್ರಿಕನ್- ಅಮೇರಿಕಾನ್ ಸದಸ್ಯರೊಬ್ಬರು ಆಯ್ಕೆಯಾಗಿದ್ದಾರೆ.
ಇನ್ನು ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಸದಸ್ಯ ನ್ಯೂಯಾರ್ಕ್ನ ಎಲಿಯೋಟ್ ಏಂಗಲ್ ಈಗ ಈ ಸ್ಥಾನದಲ್ಲಿದ್ದು, ಮುಂದಿನ ವರ್ಷ ನಡೆಯಲಿರುವ 117ನೇ ಕಾಂಗ್ರೆಸ್ನಲ್ಲಿ 67 ವರ್ಷದ ಗ್ರೆಗೊರಿ ಮೀಕ್ಸ್ ಅವರು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಬ್ಲ್ಯಾಕ್ ಕ್ಯಾಕಸ್ನ ಪ್ರಮುಖ ಸದಸ್ಯರೂ ಆಗಿರುವ ಮೀಕ್ಸ್ ಅವರು, ಅಕ್ಟೋಬರ್ 2 ರಂದು ಗಾಂಧಿ ಪ್ಲಾಜಾದಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯಲ್ಲಿ, ಗಾಂಧಿ ಪ್ರತಿಮೆಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದರು.