ವಾಷಿಂಗ್ಟನ್, ಡಿ.04 (DaijiworldNews/PY): ಭಾರತೀಯ-ಅಮೇರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರು ಅಮೇರಿಕಾದ ಮುಂದಿನ ಸರ್ಜನ್ ಜನರಲ್ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವಿವೇಕ್ ಮೂರ್ತಿ ಅವರು ಒಬಾಮ ಅವರ ಆಡಳಿತದ ವೇಳೆಯಲ್ಲಿ ಈ ಹುದ್ದೆಗೆ ನಿಯೋಜನೆಗೊಂಡಿದ್ದರು. ಬಳಿಕ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಸಂದರ್ಭ ಹುದ್ದೆಯಿಂದ ನಿರ್ಗಮಿಸಿದ್ದರು. ಇದೀಗ ಜೊ ಬಿಡೆನ್ ಅವರ ಕೊರೊನಾ ಸಲಹಾ ಮಂಡಳಿಯ ಮೂವರು ಸಹ ಅಧ್ಯಕ್ಷರ ಸಮಿತಿಯಲ್ಲಿ ಓರ್ವರಾಗಿದ್ದಾರೆ.
ಸರ್ಜನ್ ಹುದ್ದೆಗೆ ನೇಮಕವಾಗುವವರು ಈ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಅಲ್ಲದೇ, ಅವರು ಸಾರ್ವಜನಿಕ ಆರೋಗ್ಯ ವಿಷಯಗಳ ಬಗ್ಗೆ ಸರ್ಕಾರದ ಉನ್ನತ ಅಧಿಕಾರಿಯೂ ಆಗಿರುತ್ತಾರೆ. ಈಗಿನ ಸರ್ಜನ್ ಜನರಲ್ ಆಗಿ ಜೆರೋಮ್ ಆಡಮ್ಸ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.