ದುಬೈ, ಡಿ.05 (DaijiworldNews/MB) : ಫೈಜರ್ ಮತ್ತು ಬಯೋಎನ್ಟೆಕ್ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯನ್ನು ಬಳಸಲು ಬಹರೇನ್ ಸಮ್ಮತಿಸಿದೆ. ತುರ್ತು ಸಂದರ್ಭದಲ್ಲಿ ಲಸಿಕೆ ಬಳಕೆಗೆ ಅನುಮತಿ ನೀಡಿದ ಎರಡನೇ ರಾಷ್ಟ್ರವಾಗಿ ಬಹರೇನ್ ಗುರುತಿಸಿದೆ.
ಈ ಹಿಂದೆ ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊರೊನಾ ತಡೆ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿತ್ತು.
ಈ ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ಬಹರೇನ್ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದು, ಲಸಿಕೆ ಪ್ರಯೋಗ, ವರದಿ ಆಧಾರದಲ್ಲಿ ಬಹರೇನ್ನ ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಪ್ರಾಧಿಕಾರ, ಫೈಜರ್ ಮತ್ತು ಬಯೋಎನ್ಟೆಕ್ ಉತ್ಪಾದಿಸಿದ ಕೊರೊನಾ ವಿರುದ್ದದ ಲಸಿಕೆಯನ್ನು ಬಳಸಲು ಅನುಮೋದಿಸಿದೆ ಎಂದು ತಿಳಿಸಿದ್ದು ಆದರೆ ಎಷ್ಟು ಡೋಸ್ಗಳನ್ನು ಖರೀದಿಸಲಾಗಿದೆ ಎಂಬುದರ ಬಗ್ಗೆ ಬಹರೇನ್ ಸರ್ಕಾರ ಈವರೆಗೂ ಅಧಿಕೃತ ಮಾಹಿತಿ ನೀಡಿಲ್ಲ.