ವಾಷಿಂಗ್ಟನ್, ಡಿ.05 (DaijiworldNews/PY): ಕರ್ತವ್ಯದಲ್ಲಿದ್ದ ಸಂದರ್ಭ ಹತ್ಯೆಗೀಡಾದ ಸಿಖ್ಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ ಹೆಸರನ್ನು ಹ್ಯೂಸ್ಟನ್ನ ಅಂಚೆ ಕಚೇರಿಗೆ ಇಡುವ ಮಸೂದೆಗೆ ಸರ್ವಾನುಮತದಿಂದ ಅಮೇರಿಕಾದ ಸೆನೆಟ್ ಅಂಗೀಕರಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸತ್ನ ಕೆಳಮನೆಯು, ಹ್ಯೂಸ್ಟನ್ನಲ್ಲಿನ 315 ಅಡಿಕ್ಸ್ ಹೋವೆಲ್ ರಸ್ತೆಯಲ್ಲಿರುವ ಅಂಚೆ ಕಚೇರಿಗೆ ಡೆಪ್ಯುಟಿ ಸಂದೀಪ್ ಸಿಂಗ್ ಧಲಿವಾಲ ಎಂದು ಮರುನಾಮಕರಣ ಮಾಡುವ ಮಸೂದೆಯನ್ನು ಅಂಗೀಕರಿಸಿತ್ತು. ಇನ್ನು ಈ ಮಸೂದೆಗೆ ಕೇವಲ ಡೊನಾಲ್ಡ್ ಟ್ರಂಪ್ ಅವರ ಅಂಕಿತ ಬಾಕಿ ಇದೆ.
ಹ್ಯೂಸ್ಟನ್ನಲ್ಲಿರುವ ಈ ಅಂಚೆ ಕಚೇರಿ ಭಾರತೀಯ - ಅಮೇರಿಕನ್ ಹೆಸರಿನಲ್ಲಿ ನಾಮಕರಣವಾಗುತ್ತಿರುವ ಎರಡನೇಯ ಅಂಚೆ ಕಚೇರಿಯಾಗಿದೆ. ಮೊದಲನೆಯ ಅಂಚೆ ಕಚೇರಿಗೆ 2006ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಮೊದಲ ಭಾರತೀಯ ಅಮೇರಿಕನ್ ಸಂಸದ ಸಲೀಪ್ ಸಿಂಗ್ ಸೌಂದ್ ಎಂದು ಹೆಸರಿಡಲಾಗಿತ್ತು.