ತೈಪೆ, ಡಿ.06 (DaijiworldNews/PY): ಚೀನಾದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸುವ ಕಾರ್ಯ ವಿವಿಧ ಹಂತಗಳಲ್ಲಿವೆ. ಏತನ್ಮಧ್ಯೆ ಚೀನಾದ ಪ್ರಾಂತೀಯ ಸರ್ಕಾರಗಳು ಲಸಿಕೆ ಸಂಗ್ರಹಕ್ಕೆ ಮುಂದಾಗಿದ್ದು, ಲಸಿಕೆಗಳ ಪೂರೈಕೆಗೆ ಬೇಡಿಕೆ ಸಲ್ಲಿಸಿವೆ.
ಸಾಂದರ್ಭಿಕ ಚಿತ್ರ
ಆರೋಗ್ಯ ಅಧಿಕಾರಿಗಳು, ಈ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಅಧಿಕೃತವಾದ ಮಾಹಿತಿ ಒದಗಿಸಿಲ್ಲ. ಚೀನಾದ 140 ಕೋಟಿ ಜನರಿಗೆ ಈ ಲಸಿಕೆಯನ್ನು ಹೇಗೆ ತಲುಪಿಸಬೇಕು ಎನ್ನು ಬಗ್ಗೆ ಕೂಡಾ ತಿಳಿಸಿಲ್ಲ.
ಸದ್ಯ ಚೀನಾದಲ್ಲಿ ಐದು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈಜಿಫ್ಟ್, ರಷ್ಯಾ, ಮೆಕ್ಸಿಕೊ ಸೇರಿದಂತೆ 12ಕ್ಕೂ ಅಧಿಕ ದೇಶಗಳಲ್ಲಿ ನಾಲ್ಕು ಉತ್ಪಾದಕರಿಂದ ಕನಿಷ್ಠ ಐದು ಲಸಿಕೆಗಳನ್ನು ಪರೀಕ್ಷಿಸಲಾಗುತ್ತಿದೆ.
ಸೈನೋಫಾರ್ಮಾ ಎನ್ನುವ ಲಸಿಕೆ ತಯಾರಿಸುವ ಕಂಪೆನಿ ನವೆಂಬರ್ನಲ್ಲಿ ತನ್ನ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮೋದನೆಗೆ ಅರ್ಜಿ ಸಲ್ಲಿಸಿತ್ತು.
ಕೊರೊನಾ ಸೋಂಕಿನಿಂದ ಗುಣಮುಖರಾದವರ ಪೈಕಿ ಉಂಟಾಗಿರುವ ಪ್ರತಿಕಾಯಗಳ ಸಂಖ್ಯೆಗೆ ಹೋಲಿಕೆ ಮಾಡಿದಲ್ಲಿ, ಸೈನೋವ್ಯಾಕ್ನ ಲಸಿಕೆ ಪಡೆದವರಲ್ಲಿ ಕಡಿಮೆ ಪ್ರಮಾಣದ ಪ್ರತಿಕಾಯಗಳು ಸೃಷ್ಠಿಯಾಗಿವೆ ಎಂದು ನಿಯತಕಾಲಿಕದಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಹೇಳುತ್ತದೆ.