ವಾಷಿಂಗ್ಟನ್,ಡಿ.07 (DaijiworldNews/HR): ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಕೀಲ ರೂಡಿ ಜೂಲಿಯಾನಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, "ನ್ಯೂಯಾರ್ಕ್ನ ಇತಿಹಾಸದಲ್ಲೇ ಶ್ರೇಷ್ಠ ಮೇಯರ್ ಹಾಗೂ ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಚುನಾವಣೆಯನ್ನು ಹೊರಗೆಳೆಯಲು ದಣಿವರಿಯದೆ ಶ್ರಮಿಸುತ್ತಿರುವ ರೂಡಿ ಜೂಲಿಯಾನಿ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ" ಎಂದು ತಿಳಿಸಿದ್ದಾರೆ.
ಇನ್ನು ರೂಡಿ ಜೂಲಿಯಾನಿ ಅವರು ವಾಷಿಂಗ್ಟನ್ನಲ್ಲಿರುವ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.