ಲಂಡನ್, ಡಿ.08 (DaijiworldNews/MB) : ಸೂಕ್ತ ಸಮಯ ಬಂದಾಗ ಲಸಿಕೆ ತೆಗೆದುಕೊಳ್ಳುವೆ ಎಂದು ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದರು.
ಬ್ರಿಟನ್ನಲ್ಲಿ ಫೈಜರ್ ಲಸಿಕೆಯ ತುರ್ತು ಬಳಕೆಗೆ ಈಗಾಗಲೆ ಅನುಮೋದನೆ ನೀಡಲಾಗಿದ್ದು ಮಂಗಳವಾರದಿಂದ ಲಸಿಕೆಯನ್ನು ಹಾಕುವ ಪ್ರಕ್ರಿಯೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್, ನನಗೂ ಲಸಿಕೆ ತೆಗೆದುಕೊಳ್ಳುವ ಬಯಕಿಯಿದೆ. ಸೂಕ್ತ ಸಮಯ ಬಂದಾಗಿ ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಲಂಡನ್ನಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗುತ್ತಿದ್ದು ಈ ಹಿನ್ನೆಲೆ ಜನರು ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಕೂಡಾ ಈ ಸಂದರ್ಭದಲ್ಲೇ ಅವರು ಮನವಿ ಮಾಡಿದರು.
ಫೈಜರ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ ಬಳಿಕ ಲಸಿಕೆಯ ಮೊದಲ ಡೋಸ್ನ್ನು ಬ್ರಿಟನ್ನ 90 ವರ್ಷದ ವೃದ್ದೆ ಮಾರ್ಗರೆಟ್ ಕೀನನ್ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಅವರು ಫೈಜರ್ ಲಸಿಕೆಯ ಮೊದಲ ಡೋಸ್ನ್ನು ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬ್ರಿಟನ್ನ 90 ವರ್ಷದ ವೃದ್ದೆ ಮಾರ್ಗರೆಟ್ ಕೀನನ್ ಪಾತ್ರರಾಗಿದ್ದಾರೆ.