ವಾಷಿಂಗ್ಟನ್, ಡಿ.09 (DaijiworldNews/PY): ಪೆನ್ಸೆಲ್ವೇನಿಯಾದಲ್ಲಿ ಮತ ಪ್ರಮಾಣ ನೀಡದಂತೆ ತಡೆ ನೀಡಬೇಕು ಎಂದು ಕೋರಿದ್ದ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ಅರ್ಜಿಯನ್ನು ಅಮೇರಿಕಾದ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಈ ಬಗ್ಗೆ ಒಂಭತ್ತು ನ್ಯಾಯಮೂರ್ತಿಗಳು ಒಮ್ಮತದ ತೀರ್ಪು ನೀಡಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಅವರು 70 ಲಕ್ಷಕ್ಕೂ ಹೆಚ್ಚು ಮತ ಗಳಿಸಿ ಜಯಗಳಿಸಿದ್ದರೂ ಕೂಡಾ, ಡೊನಾಲ್ಡ್ ಟ್ರಂಪ್ ಬಣ ಮಾತ್ರ ಈ ಬಗ್ಗೆ ಆರೋಪ ಮಾಡುತ್ತಿತ್ತು.
ರಿಪಬ್ಲಿಕನ್ ಸಂಸದ ಮೈಕ್ ಕೆಲ್ಲಿ ಅವರು ಪೆನ್ಸೆಲ್ವೇನಿಯಾದಲ್ಲಿ ಮತ ಪ್ರಮಾಣ ನೀಡದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದು, ರಾಜ್ಯದ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದ್ದು, ಬೆಂಬಲಿಗರು ದೇಶದ ಸುಪ್ರೀಂ ಕೋರ್ಟ್ನ ಮೊರೆ ಹೋಗಿದ್ದಾರೆ.