ಸೋಲ್, ಡಿ.09 (DaijiworldNews/PY): ಕೊರೊನಾ ವೈರಸ್ನಿಂದ ಉತ್ತರ ಕೊರಿಯಾ ಸಂಪೂರ್ಣವಾಗಿ ಮುಕ್ತವಾಗಿದೆ ಎಂದ ಹೇಳಿರುವುದನ್ನು ಪ್ರಶ್ನಿಸಿದ ಕಾರಣ ದಕ್ಷಿಣ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪರಿಣಾಮ ಎದುರಿಸಲು ಸಿದ್ಧರಾಗಿ" ಎಂದು ಕಿಮ್ ಯೋ ಯಂಗ್ ದಕ್ಷಿಣ ಕೊರಿಯಾಕ್ಕೆ ತಿರುಗೇಟು ನೀಡಿದ್ದಾರೆ.
"ಉತ್ತರ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳಿಲ್ಲ ಎನ್ನುವ ವಿಚಾರವನ್ನು ನಂಬಲು ಸಾಧ್ವವಾಗುತ್ತಿಲ್ಲ. ಉತ್ತರ ಕೊರೊಯಾವು ಕೊರೊನಾವನ್ನು ಜಂಟಿಯಾಗಿ ನಿಭಾಯಿಸುವ ಪ್ರಸ್ತಾಪವನ್ನು ಕೂಡಾ ತಳ್ಳಿ ಹಾಕಿದೆ" ಎಂದು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವೆ ಕಾಂಗ್ ಕ್ಯುಂಗ್-ವಾ ತಿಳಿಸಿದ್ದರು.
"ಮುಂಬರುವ ದಿನಗಳಲ್ಲಿ ಕೊರೊನಾ ನಿಯಂತ್ರಣ ಬಗೆಗಿನ ಚರ್ಚೆ ಇನ್ನೂ ಕಡಿಮೆಯಾಗಲಿದ್ದು, ಆದರೂ ಕೂಡಾ ಉತ್ತರ ಕೊರಿಯಾ ನಮ್ಮಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲ ಎನ್ನುತ್ತಿದ್ದಾರೆ" ಎಂದು ಹೇಳಿದ್ದರು.
ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವೆ ಕಾಂಗ್ ಕ್ಯುಂಗ್-ವಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಿಮ್ ಯೋ ಜಾಂಗ್, "ಪರಿಣಾಮದ ವಿಚಾರವಾಗಿ ಏನು ತಿಳಿಯದೇ ಈ ರೀತಿಯಾಗಿ ಮಾತನಾಡಿದ್ದಾರೆ. ಈ ಹೇಳಿಕೆ ಉತ್ತರ ಹಾಗೂ ದಕ್ಷಿಣ ಕೊರಿಯಾದ ಸಂಬಂಧದ ಮೇಲೆ ಪರಿಣಾಮ ಉಂಟು ಮಾಡಬಹುದು" ಎಂದು ತಿಳಿಸಿದ್ದಾರೆ.