ವಾಷಿಂಗ್ಟನ್, ಡಿ.11 (DaijiworldNews/PY): ಅಮೇರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಕೊರೊನಾ ವಿರುದ್ದ ಪರಿಣಾಮಕಾರಿ ಲಸಿಕೆಯಾಗಿ ಗುರುತಿಸಿಕೊಂಡಿರುವ ಫೈಝರ್ ಲಸಿಕೆಯ ಬಳಕೆಗೆ ಒಪ್ಪಿಗೆ ನೀಡಿದೆ.
ಸಾಂದರ್ಭಿಕ ಚಿತ್ರ
ಎಫ್ಡಿಎ ವಿಭಾಗದ ತಜ್ಞರ ಲಸಿಕೆ ಸಲಹಾ ಮಂಡಳಿಯು ಗುರುವಾರ ಲಸಿಕೆಯ ಪರಿಣಾಮದ ವಿಚಾರವಾಗಿ ಚರ್ಚೆಸಿತು. ಬಳಿತ ತುರ್ತು ಬಳಕೆಯ ಅಂತಿಮ ತೀರ್ಮಾನದ ಬಗ್ಗೆ ಮತಹಾಕಲಾಗಿದ್ದು, 17 ಮತಗಳು ತುರ್ತು ಬಳಕೆಯ ಪರವಾಗಿತ್ತು, ನಾಲ್ಕು ಮತಗಳು ವಿರುದ್ಧ ಹಾಗೂ ಓರ್ವ ಗೈರಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ, ಫೈಝರ್-ಬಯೋಎಂಟೆಕ್ ಕೊರೊನಾ ಲಸಿಕೆಯ ಪ್ರಯೋಜನಗಳು 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಅಪಾಯಕ್ಕಿಂತ ಅಧಿಕ ಪ್ರಯೋಜನಗಳನ್ನು ಹೊಂದಿರುವುದಾಗಿ ಪ್ರಾಥಮಿಕ ಹಂತದಲ್ಲಿ ತಿಳಿದಿರುವ ಕಾರಣ ತುರ್ತುಬಳಕೆಗೆ ಈ ಲಸಿಕೆಯನ್ನು ಬಳಸಲು ಅನಮೋದನೆ ನೀಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಬ್ರಿಟನ್, ಕೆನಡಾ, ಬಹ್ರೇನ್ ಮತ್ತು ಸೌದಿ ಅರೇಬಿಯಾ ಈಗಾಗಲೇ ಲಸಿಕೆಯನ್ನು ಅನುಮೋದಿಸಿವೆ. ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದ ವಿಶ್ವದ ಮೊದಲನೆಯ ಲಸಿಕೆಯಾಗಿದೆ.