ಟೆಹ್ರಾನ್, ಡಿ.12 (DaijiworldNews/PY): ಆನ್ಲೈನ್ ಮುಖೇನ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಒಮ್ಮೆ ಗಡಿಪಾರು ಮಾಡಲಾಗಿದ್ದ ಪತ್ರಕರ್ತನೋರ್ವನನ್ನು ಶನಿವಾರ ಇರಾನ್ ಸರ್ಕಾರ ಗಲ್ಲಿಗೇರಿಸಿದೆ.
ಸಾಂದರ್ಭಿಕ ಚಿತ್ರ
2017ರಲ್ಲಿ ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪ್ತಿ ನಡೆದ ಪ್ರತಿಭಟನೆಯನ್ನು ತನ್ನ ಆನ್ಲೈನ್ ಚಾನಲ್ ಮೂಲಕ ಪ್ರಚಾರ ಮಾಡಿದ್ದು, ಪ್ರತಿಭಟನೆಗೆ ಜನರನ್ನು ಪ್ರಚೋದಿಸಿದ್ದರು ಎನ್ನುವ ಆರೋಪದ ಮೇರೆಗೆ ಶಿಕ್ಷೆಗೆ ಗುರಿಯಾಗಿದ್ದ ಪತ್ರಕರ್ತರ ರುಹೊಲ್ಲಾಹ್ ಝಾಮ್ ಅವರನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿದೆ.
ಈ ಪ್ರಕರಣದ ಸಂಬಂಧ ಕಳೆದ ಜೂನ್ನಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಇದು ಭೂಮಿಯ ಮೇಲಿನ ಭ್ರಷ್ಟಾಚಾರ ಎಂದಿದ್ದು, ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇದು ಗೂಢಚರ್ಯೆ ಅಥವಾ ಇರಾನ್ನ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಹೆಚ್ಚಾಗಿ ಬಳಲ್ಪಡುತ್ತದೆ.
ಝಾಮ್ನ ವೆಬ್ಸೈಟ್ ಹಾಗೂ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಂ ಮುಖೇನ ಇರಾನ್ನ ಚಾನೆಲ್ ಶಿಯಾ ಪ್ರಜಾಪ್ರಭುತ್ವವನ್ನು ನೇರವಾಗಿ ಪ್ರಶ್ನಿಸಿದ ಅಧಿಕಾರಿಗಳ ಬಗ್ಗೆ ಮುಜುಗರದ ಮಾಹಿತಿಯನ್ನು ಪ್ರಚಾರ ಮಾಡಿ, ಸರ್ಕಾರದ ವಿರುದ್ದವಾಗಿ ನಡೆಯುವ ಪ್ರತಿಭಟನೆಯ ಸಮಯವನ್ನು ಪ್ರಕಟಿಸಲಾಗಿತ್ತು.
2017ರ ಕೊನೆಯಲ್ಲಿ ಪ್ರಾರಂಭವಾದ ಪ್ರತಿಭಟನೆಗಳು, 2009ರ ಹಸಿರು ಚಳವಳಿಯ ಪ್ರತಿಭಟನೆಯ ನಂತರ ಇರಾನ್ಗೆ ದೊಡ್ಡ ಸವಾಲನ್ನು ತಂದಿದ್ದು, ಕಳೆದ ವರ್ಷದ ನವೆಂಬರ್ನಲ್ಲಿ ಇದೇ ರೀತಿಯ ಸಾಮೂಹಿಕ ಅಶಾಂತಿಗೆ ವೇದಿಕೆ ಕಲ್ಪಿಸಿದವು.