ವಾಷಿಂಗ್ಟನ್, ಡಿ.13 (DaijiworldNews/PY): ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ಭಾರತ ಮೂಲದ ಅಮೇರಿಕಾ ಸಿಖ್ಖರು ವಾಷಿಂಗ್ಟನ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭ ಖಲಿಸ್ತಾನ ಪ್ರತ್ಯೇಕಾವಾದಿಗಳು ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.
ಚಳವಳಿ ನಿರತ ರೈತರ ಪರವಾಗಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಗ್ರೇಟರ್ ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್, ವರ್ಜೀನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ ಉತ್ತರ ಕೆರೋಲಿನಾ ಮುಂತಾದ ಕಡೆಗಳಿಮದ ನೂರಾರು ಮಂದಿ ಸಿಖ್ಖರು ವಾಷಿಗ್ಟಂನ್ ಡಿ.ಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಾರ್ ರ್ಯಾಲಿ ನಡೆಸಿದರು.
ಹೋರಾಟವು ಶಾಂತಿಯುತವಾಗಿ ನಡೆಯುತ್ತಿತ್ತು. ಈ ಸಂದರ್ಭ ಕಲೆವು ಪ್ರತ್ಯೇಕತಾವಾದಿ ಸಿಖ್ಖರು ಖಲಿಸ್ತಾಬ ರಿಪಬ್ಲಿಕ್ ಎನ್ನುವ ಧ್ವಜ ಹಿಡಿದು ಘೋಷಣೆ ಕೂಗಿದ್ದಾರೆ. ಅಲ್ಲದೇ, ಭಾರತ ವಿರೋಧಿ ಪೋಸ್ಟರ್ಗಳನ್ನು ಕೂಡಾ ಪ್ರದರ್ಶಿಸಿದ್ದಾರೆ. ಈ ನಡುವೆ ಮಹಾತ್ಮ ಗಾಂಧಿ ಪ್ರತಿಮೆ ಇದ್ದ ಪ್ರಾಂಗಣಕ್ಕೆ ಹಾರಿ ಪೋಸ್ಟರ್ಗಳನ್ನು ಅಂಟಿಸಿದ್ದಲ್ಲದೇ, ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.
ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ್ದು ಖಂಡನಾರ್ಹ, ರಾಯಭಾರ ಕಚೇರಿಯು ಈ ಕೃತ್ಯವನ್ನು ಖಂಡಿಸುತ್ತದೆ ಎಂದು ತಿಳಿಸಿದೆ.