ನ್ಯೂಯಾರ್ಕ್, ಡಿ.14 (DaijiworldNews/PY): ನ್ಯೂಯಾರ್ಕ್ನ ಚರ್ಚ್ವೊಂದರಲ್ಲಿ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯೋರ್ವನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಘಟನೆ ಡಿ.13ರ ಭಾನುವಾರದಂದು ಸಂಜೆ 4 ಗಂಟೆಯ ಸುಮಾರಿಗೆ ನ್ಯೂಯಾರ್ಕ್ನ ಸೇಂಟ್ ಜಾನ್ ದಿ ಡಿವೈನ್ ಕ್ಯಾಥೆಡ್ರಲ್ ಚರ್ಚ್ನಲ್ಲಿ ನಡೆದಿದೆ.
ಚರ್ಚ್ನಲ್ಲಿ ಕ್ರಿಸ್ಮಸ್ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಇನ್ನೇನು ಕಾರ್ಯಕ್ರಮ ಅಂತ್ಯವಾಗುತ್ತಿದ್ದ ಸಂದರ್ಭ ಬಂದೂಕುಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಈ ಸಂದರ್ಭ ಪೊಲೀಸರು ಆತನನ್ನು ನಿಯಂತ್ರಿಸುವ ಸಲುವಾಗಿ ಗುಂಡು ಹಾರಿಸಿದ್ದಾರೆ.
ಪೊಲೀಸರು ಗುಂಡು ಹಾರಿಸಿದ ಪರಿಣಾಮ ಆತನ ಪರಿಸ್ಥಿತಿ ಗಂಭೀರವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಚರ್ಚ್ನಲ್ಲಿ ಕ್ರಿಸ್ಮಸ್ ಸಂಗೀತ ಕಾರ್ಯಕ್ರಮ ಮುಗಿದ ನಂತರ ಚರ್ಚ್ನಿಂದ ಜನರು ಹೊರಬರುತ್ತಿದ್ದ ಸಂದರ್ಭ ಗುಂಡಿನ ಶಬ್ಧ ಕೇಳಿಬಂದಿದೆ.
ಗುಂಡಿನ ಸದ್ದಿನಿಂದ ಭಯಗೊಂಡ ಜನರು ಸ್ಥಳದಿಂದ ಓಡಲು ಆರಂಭಿಸಿದ್ದು, ಈ ಸಂದರ್ಭ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರು ಬಂದೂಕುಧಾರಿಯ ಮೇಲೆ ಗುಂಡು ಹಾರಿಸಿದ್ದಾರೆ.