ಬಿಜಿಂಗ್, ಡಿ.14 (DaijiworldNews/MB) : ಸಾರ್ಸ್ ಕೊರೊನಾ ವೈರಸ್-2 (SARS-CoV-2) 2019ರ ಬೇಸಿಗೆಯಲ್ಲಿ ಭಾರತದಲ್ಲಿ ಹುಟ್ಟಿದೆ. ಕೊರೊನಾ ವೈರಸ್ನ ಉಗಮ ಸ್ಥಾನ ಭಾರತ ಎಂದು ವಾದಿಸಿದ್ದ ಚೀನಾದ ಉನ್ನತ ಮಟ್ಟದ ವಿಜ್ಞಾನ ಸಂಸ್ಥೆ, 'ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್' ತಂಡ ತನ್ನ ಅಧ್ಯಯನವನ್ನು ಹಿಂತೆಗೆದುಕೊಂಡಿದೆ.
ಈ ಅಧ್ಯಯನವನ್ನು ಸಿಎಎಸ್, ಶಾಂಘೈ ಮೂಲದ ಫುಡಾನ್ ವಿಶ್ವವಿದ್ಯಾಲಯ ಮತ್ತು ಹೂಸ್ಟನ್ನ ಟೆಕ್ಸಾಸ್ ವಿಶ್ವವಿದ್ಯಾಲಯದ ಅಡಿಯಲ್ಲಿ ನ್ಯೂರೋಸೈನ್ಸ್ ಸಂಸ್ಥೆಯ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ.
ಹೊಸ ಅಧ್ಯಯನ ವರದಿಯೊಂದನ್ನು ಮುಂದಿಟ್ಟಿದ್ದ ಈ ತಂಡವು ಭಾರತವು ವೈರಸ್ನ ಮೊದಲ ಪ್ರಸರಣಾ ಪ್ರದೇಶವಾಗಿರಬಹುದು. ವುಹಾನ್ನಲ್ಲಿ ಸಾರ್ಸ್ ಕೊರೊನಾ ವೈರಸ್-2ನ ಮಾನವರ ನಡುವಿನ ಪ್ರಸರಣೆ ಸಂಭವಿಸಿದೆ. ಆದರೆ ವುಹಾನ್ನಲ್ಲಿ ವೈರಸ್ ಹರಡುವುದಕ್ಕೂ ಮೊದಲು ವೈರಸ್ ಪ್ರಸರಣೆಗೊಂಡು ಸ್ವಲ್ಪ ಮಟ್ಟಿನ ವಿಕಸನವನ್ನು ಕಂಡಿದೆ. ಕನಿಷ್ಠ ರೂಪಾಂತರಿತ ವೈರಸ್ ತಳಿಯ ಭೌಗೋಳಿಕ ಮಾಹಿತಿ ಮತ್ತು ವೈವಿಧ್ಯತೆಯ ಪ್ರಕಾರ ಇದು ಭಾರತದ್ದು ಆಗಿರುವ ಸಾಧ್ಯತೆಯಿದೆ ಎಂದಿದ್ದರು.
ಬಾಂಗ್ಲಾದೇಶ, ಅಮೆರಿಕ, ಗ್ರೀಸ್, ಆಸ್ಟ್ರೇಲಿಯಾ, ಭಾರತ, ಇಟಲಿ, ಜೆಕ್ ರಿಪಬ್ಲಿಕ್, ರಷ್ಯಾ ಮತ್ತು ಸೆರ್ಬಿಯಾವನ್ನು ಈ ವೈರಸ್ ಹುಟ್ಟಿರುವ ಸಂಭಾವ್ಯ ದೇಶಗಳಾಗಿ ಈ ಅಧ್ಯಯನ ಉಲ್ಲೇಖಿಸಿತ್ತು. ಈ ಪ್ರದೇಶದಲ್ಲಿ ವೈರಸ್ ಜುಲೈ ಅಥವಾ ಆಗಸ್ಟ್ 2019ರಲ್ಲಿ ಹರಡಿದೆ ಎಂದು ಈ ಅಧ್ಯಯನ ಹೇಳಿತ್ತು.
ಇನ್ನು ಚೀನಾ ಇತರ ದೇಶಗಳನ್ನು ದೂಷಿಸಿದ್ದು ಇದು ಮೊದಲೇನಲ್ಲ. ವೈರಸ್ನ ಉಗಮಸ್ಥಾನಕ್ಕೆ ಸಂಬಂಧಿಸಿದಂತೆ ಚೀನಾ ಇತರ ದೇಶಗಳನ್ನು ಹಲವು ಬಾರಿ ದೂಷಿಸಿದೆ. ಈ ಹಿಂದೆ ಇಟಲಿ ಮತ್ತು ಅಮೇರಿಕಾ ಕೊರೊನಾ ವೈರಸ್ನ ಉಗಮ ಸ್ಥಾನ ಎಂದು ಚೀನಾ ಹೇಳಿತ್ತು.