ವಿಶ್ವಸಂಸ್ಥೆ, ಡಿ.16 (DaijiworldNews/PY): ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಸಿದ್ಧಾರ್ಥ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ಅವರು ನೇಮಕ ಮಾಡಿದ್ದಾರೆ.
"ಸರ್ಕಾರದ ಅನುಮತಿಯೊಂದಿಗೆ ಅಂಟೊನಿಯ ಗುಟೆರಸ್ ಅವರನ್ನು ಸಿದ್ಧಾರ್ಥ್ ಅವರನ್ನು ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ನೇಮಕ ಮಾಡಿದ್ದಾರೆ. ಸಿದ್ಧಾರ್ಥ್ ಅವರು ಜನವರಿಯ 2-3ನೇ ವಾರದಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ" ಎಂದು ಪ್ರಧಾನ ಕಾರ್ಯದರ್ಶಿಯ ವಕ್ತಾರರು ಹೇಳಿದ್ದಾರೆ.
ಸ್ಥಾನಿಕ ಸಂಯೋಜಕರಾಗಿ ನೇಮಕಗೊಂಡವರು, ಆ ದೇಶದ ಅಭಿವೃದ್ಧಿಯ ಕಾರ್ಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಸಿದ್ಧಾರ್ಥ್ ಚಟರ್ಜಿ ಅವರಿಗೆ ಅಂತರಾಷ್ಟ್ರೀಯ ಸಹಕಾರ ಸೇರಿದಂತೆ ಸುಸ್ಥಿರ ಅಭಿವೃದ್ಧಿ, ಮಾನವೀಯ ಸಮನ್ವಯ, ಶಾಂತಿ ಹಾಗೂ ಸುರಕ್ಷತೆ ಕ್ಷೇತ್ರಗಳಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.