ವಾಷಿಂಗ್ಟನ್, ಡಿ.16 (DaijiworldNews/PY): ಭಾರತದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಚೀನಾ ಆಕ್ರಮಣ ಸೇರಿ ಹಲವು ಪ್ರಮುಖ ರಕ್ಷಣಾತ್ಮಕ ವಿಚಾರಗಳನ್ನು ಒಳಗೊಂಡ ಸುಮಾರು 740 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಮಸೂದೆಗೆ ಅಮೇರಿಕಾ ಸಂಸತ್ತು ಅನುಮೋದನೆ ನೀಡಿದೆ.
ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆಗೆ ಅಮೇರಿಕಾದ ಜನಪ್ರತಿನಿಧಿಗಳ ಹಾಗೂ ಸೆನೆಟ್ ಅಂಗೀಕರಿಸಿದೆ. ಇದರಲ್ಲಿ ಭಾರತೀಯ-ಅಮೇರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಅವರ ನಿರ್ಣಯದ ಭಾಷೆಯ ಪ್ರಮುಖ ಅಂಶಗಳು ಸೇರಿವೆ.
ಎಲ್ಒಸಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣವನ್ನು ಕೊನೆಗೊಳಿಸುವಂತೆ ಚೀನಾ ಸರ್ಕಾರವನ್ನು ಒತ್ತಾಯಿಸುವಂತ ಮುಖ್ಯವಾದ ಅಂಶಗಳು ಈ ಕಾಯ್ದೆಯಲ್ಲಿವೆ.
ಚೀನ ಹಾಗೂ ಭಾರತವನ್ನು ಈ ವರ್ಷದ ಮೇ ತಿಂಗಳಿನಿಂದ ಪೂರ್ವ ಲಡಾಕ್ನ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ ಸೇನೆಯನ್ನು ನಿಯೋಜನೆ ಮಾಡಿವೆ. ಇದರ ಸಮಸ್ಯೆಯನ್ನು ಪರಿಹರಿಸಲು ಉಭಯ ದೇಶಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದರೂ ಕೂಡಾ ಯಾವುದೇ ರೀತಿಯಾದ ದೃಢವಾದ ಫಲಿತಾಂಶ ದೊರೆತಿಲ್ಲ.
ಸೆನೆಟ್ ಆವೃತ್ತಿಗಳನ್ನು ಈ ತಿಂಗಳ ಆರಂಭದಲ್ಲಿ ಉಭಯಪಕ್ಷೀಯ ಕಾಂಗ್ರೆಸ್ಸಿನ ಸಮ್ಮೇಳನ ಸಮಿತಿಯು ಹೊಂದಾಣಿಕೆ ಮಾಡಿತ್ತು.