ನೆದರ್ಲ್ಯಾಂಡ್ಸ್, ಡಿ.17 (DaijiworldNews/PY): 2016ರ ಅಕ್ಟೋಬರ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು ಎನ್ನುವ ವಿಚಾರವನ್ನು ಡಚ್ ಸರ್ಕಾರ ಸ್ಪಷ್ಟಪಡಿಸಿದೆ.
ಟ್ರಂಪ್ ಅವರ ಟ್ವಿಟ್ಟರ್ ಖಾತೆಗೆ ಡಚ್ ಭದ್ರತಾ ಸಂಶೋಧಕರಾದ ವಿಕ್ಟರ್ ಗೇವರ್ಸ್(44) ಎನ್ನುವವರು ಲಾಗ್ಇನ್ ಆಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಚ್ ಸರ್ಕಾರದ ಪರ ವಕೀಲರು, "@realDonaldTrump ಖಾತೆಯ ಪಾಸ್ವರ್ಡ್ ಅನ್ನು ಊಹಿಸುವ ಮುಖೇನ ವಿಕ್ಟರ್ ಗೇವರ್ಸ್ ಅವರು ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಖಾತೆಗೆ ಲಾಗ್ಇನ್ ಆಗಿದ್ದರು" ಎಂದು ಹೇಳಿದ್ದಾರೆ.
"ಗೇವರ್ಸ್ ಅವರು ಯಾವುದೇ ದುರುದ್ದೇಶವಿಟ್ಟುಕೊಂಡು ಟ್ರಂಪ್ ಅವರ ಟ್ವಿಟ್ಟರ್ ಖಾತೆಗೆ ಲಾಗ್ಇನ್ ಆಗಿಲ್ಲ. ಈ ಕಾರಣದಿಂದ ಅವರಿಗೆ ಯಾವುದೇ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲ ಗೇವರ್ಸ್ ಓರ್ವ ಎಥಿಕಲ್ ಹ್ಯಾಕರ್" ಎಂದು ಡಚ್ ಸರ್ಕಾರ ಪರ ನ್ಯಾಯವಾದಿಗಳು ತಿಳಿಸಿದ್ದಾರೆ.
"ಟ್ರಂಪ್ ಅವರ ಟ್ವಿಟ್ಟರ್ ಖಾಗೆ ಲಾಗ್ಇನ್ ಆಗಲು ಹಲವು ಬಾರಿ ಪ್ರಯತ್ನಪಟ್ಟ ಬಳಿಕ 'maga2020' ಎನ್ನುವ ಪಾಸ್ವರ್ಡ್ ಅನ್ನು ಹಾಕಿದ್ದಾರೆ. ಆ ಸಂದರ್ಭ ಅವರ ಖಾತೆ ತೆರೆದುಕೊಂಡಿದೆ. 'maga2020' ಎಂದರೆ 'Make America Great Again' ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಟ್ರಂಪ್ ಅವರು ಈ ಹೇಳಿಕೆಯನ್ನು ಅವರ ಭಾಷಣಗಳಲ್ಲಿ ಹೇಳಿದ್ದ ಕಾರಣ ಇದನ್ನು ಗೇವರ್ಸ್ ಅವರು ಊಹಿಸಿಕೊಂಡಿದ್ದಾರೆ" ಎಂದು ತಿಳಿದುಬಂದಿದೆ.