ನ್ಯೂಯಾರ್ಕ್,ಡಿ.18 (DaijiworldNews/HR): ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರೋಗದ ಹರಡುವಿಕೆಯನ್ನು ತಡೆಗಟ್ಟಲು ಲಸಿಕೆಯನ್ನು ತಯಾರಿಸಲಾಗುತ್ತಿದ್ದು, ಮಾಡರ್ನಾ ತಯಾರಿಸಿದ ಕೊರೊನಾ ಲಸಿಕೆಯು ತುರ್ತು ಬಳಕೆಗಾಗಿ ಸಿದ್ದವಾಗಿದೆ.
ಸಾಂಧರ್ಭಿಕ ಚಿತ್ರ
ಅಮೇರಿಕಾದಲ್ಲಿ ಆಹಾರ ಹಾಗೂ ಔಷಧ ಆಡಳಿತವು (ಎಫ್ಡಿಎ) ಮಾರ್ಡನಾ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದನೆ ನೀಡುವಂತೆ ಸ್ವತಂತ್ರ ತಜ್ಞರ ಸಮಿತಿಯು ಶಿಫಾರಸು ಮಾಡಿದೆ.
ಇನ್ನು ಈ ಸಂಬಂಧ ಅಧಿಕೃತ ಘೋಷಣೆಯು ಶುಕ್ರವಾರ ಹೊರಬೀಳುವ ಸಾಧ್ಯತೆಯಿದ್ದು, 20 ಮತಗಳು ಮಾಡರ್ನಾ ಲಸಿಕೆ ಬಳಕೆಯ ಪರ ದೊರಕಿದರೆ ಒಂದು ಮತದ ವಿರೋಧ ವ್ಯಕ್ತವಾಯಿತು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ವಿಜ್ಞಾನಿಗಳ ಸಹಯೋಗದಲ್ಲಿ ಮಾಡರ್ನಾ ಲಸಿಕೆಯನ್ನು ತಯಾರಿಸಲಾಗಿದ್ದು, ಈ ಕುರಿತು ಮಾಡರ್ನಾ ಲಸಿಕೆಯು ಶೇಕಡಾ 94.1ರಷ್ಟು ಪರಿಣಾಮಕಾರಿಯಾಗಿದ್ದು, ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.