ಮಿಲನ್, ಡಿ.21 (DaijiworldNews/PY): ಬ್ರಿಟನ್ನಲ್ಲಿ ಕಾಣಿಸಿಕೊಂಡ ರೀತಿಯಲ್ಲೇ ಇಟಲಿಯಲ್ಲಿಯೂ ಕೂಡಾ ನೂತನ ಸ್ವರೂಪದ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಇಟಲಿಯ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೆಲ ದಿನಗಳ ಹಿಂದೆ ರೋಗಿ ಹಾಗೂ ಮತ್ತವರ ಪತ್ನಿ ಬ್ರಿಟನ್ನಿಂದ ರೋಮ್ನ ಫ್ಯೂಮಿಚಿನೊ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು, ಅವರನ್ನು ಈಗ ಪ್ರತ್ಯೇಕವಾಗಿರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಬ್ರಿಟನ್ನಲ್ಲಿ ಹೊಸ ಸ್ವರೂಪ ಕೊರೊನಾ ವೈರಸ್ ಪತ್ತೆ ಹಚ್ಚಿದ ಬೆನ್ನಲ್ಲೇ ಯುರೋಪ್ನ ಹಲವು ನೆರೆ ರಾಷ್ಟ್ರಗಳು ಅಲ್ಲಿಗಿರುವ ವಿಮಾನಯಾನವನ್ನು ರದ್ದುಪಡಿಸಿದೆ.
ಬ್ರಿಟನ್ನಲ್ಲಿ ಕೂಡಾ ನೂತನ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಅತ್ಯಂತ ವೇಗವಾಗಿ ಪಸರಿಸುತ್ತಿದೆ. ಇದನ್ನು ನಿಯಂತ್ರಿಲು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನೂತನ ಸ್ವರೂಪದ ಕೊರೊನಾ ವೈರಸ್ ಬ್ರಿಟನ್ನ ಕೆಲವು ಭಾಗಗಳಲ್ಲಿ ಮಾತ್ರ ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಬ್ರಿಟನ್ನ ನಗರ ಪ್ರದೇಶಗಳಲ್ಲಿ ಕಠಿಣವಾದ ಲಾಕ್ಡೌನ್ ಹೇರಲಾಗಿದೆ.